ಸಂತ ಅಂತೋನಿ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವ
ಮಂಗಳೂರು, ಫೆ.16: ಜೆಪ್ಪು ಸಂತ ಅಂತೋನಿ ಆಶ್ರಮದ ಪಾಲಕರಾದ ಪಾದುವಾ ಸಂತ ಅಂತೋನಿಯವರ ಪವಿತ್ರ ಅವಶೇಷದ ವಾರ್ಷಿಕ ಮಹೋತ್ಸವವನ್ನು ಶನಿವಾರ ಮಂಗಳೂರು ಮಿಲಾಗ್ರಿಸ್ ದೇವಾಲಯದ ಆವರಣದಲ್ಲ್ ಸಂಭ್ರಮದ ಬಲಿಪೂಜೆಯೊಂದಿಗೆ ಆಚರಿಸಲಾಯಿತು.
ಜೆಪ್ಪುವಿನ ಸಂತ ಆಂತೋನಿ ಆಶ್ರಮದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು.
ಕಾರವಾರ ಧರ್ಮಕ್ಷೇತ್ರದ ಬಿಷಪ್ ಅತೀ ವಂ. ಡಾ. ದುಮಿಂಗ್ ಡಾಯಸ್‌ರವರು ಸಂಭ್ರಮದ ಬಲಿಪೂಜೆಯನ್ನು ಆರ್ಪಿಸಿದರು. ಬಿಷಪ್ ದುಮಿಂಗ್ ಡಾಯಸ್ ಅವರು ರೋಗಿಗಳು ಮತ್ತು ಬಳಲುತ್ತಿರುವವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವದಿಸಿದರು.
ಪವಿತ್ರ ಬಲಿಪೂಜೆ ಬಳಿಕ ಕಾರವಾರದ ಧರ್ಮಾಧ್ಯಕ್ಷ ಡಾ. ದುಮಿಂಗ್ ಡಯಾಸ್ ಅವರನ್ನು ಸಂತ ಅಂತನಿಯವರ ಸಂಸ್ಥೆಗಳ ನಿರ್ದೇಶಕರಾದ ಫಾ. ಜೆ. ಬಿ. ಕ್ರಾಸ್ತಾ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿಯೂ ಬೆಳಗ್ಗೆ ಕೊಂಕಣಿ ಭಾಷೆಯಲ್ಲಿ ಜೆಪ್ಪು ಸಂತ ಜೋಸೆಫರ ಗುರುಮಠದ ರೆಕ್ಟರ್ ವಂದನೀಯ ರೊನಾಲ್ಡ್ ಸೆರಾವೊ ಅವರು ಬಲಿಪೂಜೆಯನ್ನು ಆರ್ಪಿಸಿ ಆಶ್ರಮದ ನಿವಾಸಿಗಳಿಗೆ ಪ್ರಾರ್ಥಿಸಿದರು. ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ವಂದನೀಯ ಬೊನವೆಂಚರ್ ಎರಡನೇ ಮಹಾಪೂಜೆಯೊಂದಿಗೆ ಆಚರಣೆಯನ್ನು ಮುಂದುವರೆಸಿ ಸಂತ ಆಂತೋನಿಯ ಭಕ್ತಾದಿಗಳಿಗೆ ಪ್ರಾರ್ಥಿಸಿದರು.
ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ವಂ. ಮ್ಯಾಕ್ಸಿಮ್ ನೊರೊನ್ಹಾ ಜೊತೆಗೆ, ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ವಂ. ಬೊನಾವೆಂಚರ್ ನಜರೆತ್, ಜೆಪ್ಪುವಿನ ಸಂತ ಆಂತೋನಿ ಸೇವಾ ಸಂಸ್ಥೆಗಳ ನಿರ್ದೇಶಕ ವಂ. ಜೆ.ಬಿ ಕ್ರಾಸ್ತಾ, ವಂ. ಗಿಲ್ಬರ್ಟ್ ಡಿ ಸೋಜಮತ್ತು ಸಹಾಯಕ ನಿರ್ದೇಶಕ ವಂ. ಅವಿನಾಶ್ ಪಾಯ್ಸ್, ವಂ. ನೆಲ್ಸನ್ ಪೇರಿಸ್ ಮತ್ತು ಇತರ ಧರ್ಮಗುರುಗಳು, ಧರ್ಮಭಗಿನಿಯರು, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.