ಉಳ್ಳಾಲ: ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಉಳ್ಳಾಲ: ಕಳೆದ ನಾಲ್ಕು ದಶಕಗಳಿಂದ ಸಮಾಜ ಸೇವೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದಂತಹ ಕಾರ್ಯವನ್ನು ನಡೆಸಿ ರಾಜ್ಯ ಪ್ರಶಸ್ತಿಯ ಮನ್ನಣೆಗೆ ಪಾತ್ರವಾಗಿರುವ ' ಮಾರುತಿ ಯುವಕ ಮಂಡಲ' ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಈ ಸಂಸ್ಥೆ ಪಡೆದುಕೊಳ್ಳಲಿ ಎಂದು ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಾವನ ಹೇಳಿದರು.
ಅವರು ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ಮೊಗವೀರ ಪಟ್ಟ ಉಳ್ಳಾಲ ಇದರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು , ನವಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಮಂಗಳೂರು ಹಾಗೂ ಡಾ| ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾಲಿಟೇಬಲ್ ಟ್ರಸ್ಟ್ , ಸೆಂಚೂರಿ ಗ್ರೂಪ್, ಬೆಂಗಳೂರುಇವರ ಸಹಯೋಗದಲ್ಲಿ ಉಳ್ಳಾಲ ದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸಾದ್ ನೇತ್ರಲಾಯ ಮಂಗಳೂರು ಇಲ್ಲಿನ ನೇತ್ರ ತಜ್ಞ ಡಾ| ವಿಷ್ಣು ಮಾತನಾಡಿದರು.
ಮಾರತಿ ಜನಸೇವಾ ಸಂಘದ ಅಧ್ಯಕ್ಷ ಸಂದೀಪ್ ಪುತ್ರನ್ ಕಾರ್ಯಕ್ರಮದ ಅಧ್ಯಕ ವಹಿಸಿದ್ದರು. ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಹಾಗೂ ಗುರಿಕಾರ ಸುರೇಂದ್ರ ಪುತ್ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಳ್ಳಾಲ ನಗರಸಭಾ ಅಧ್ಯಕ್ಷೆ ಕೆ ಶಶಿಕಲಾ, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸರಕಾರಿ ಸಂಘದ ಅಧ್ಯಕ್ಷ ವರದ ರಾಜ್ ಬಂಗೇರ ಉಳ್ಳಾಲ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾರತಿ ಜನಸೇವಾ ಸಂಘದ ಪ್ರಧಾನ ಸಂಚಾಲಕ ಸುಧೀರ್ ವಿ ಅಮೀನ್, ಚರಣ್ ಅನಿಲ್, ದಿನೇಶ್ ಕರ್ಕೇರ, ಮಹೇಶ್ ಸಾಲ್ಯಾನ್, ಕಿರಣ್,ಕಮಲಾಕ್ಷ,ವಾಸುದೇವ್, ಅಶ್ವಿನ್, ಸುಧೀರ್ ಸುವರ್ಣ, ತಿಲಕ್, ಪುನೀತ್, ಪ್ರಕಾಶ್, ವರುಣ್,ರಾಜ ಕೋಟ್ಯಾನ್, ಸುಧೀರ್ ಕೋಟ್ಯಾನ್,ಜನಾರ್ಧನ, ಚೆನ್ನಪ್ಪ ಅಮೀನ್, ಮನೋಹರ, ರೂಪೇಶ್ ಉಪಸ್ಥಿತರಿದ್ದರು.
ಪ್ರಶಾಂತ್ ಬಿ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಪಿಲ್ ಯಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಶರ್ಮಿಳಾ ಬಂಗೇರ ವಂದಿಸಿದರು.