ದೇಶದ ಭದ್ರತೆಗೆ ಕ್ಷತ್ರಿಯ ಸಮಾಜದ ಕೊಡುಗೆ ಅಪಾರ: ಕೃಷ್ಣ ಜೆ.ಪಾಲೆಮಾರ್
ಮಂಗಳೂರು: ದೇಶದ ಭದ್ರತೆಗೆ ಕ್ಷತ್ರಿಯ ಸಮಾಜ ಕೊಡುಗೆ ಅಪಾರ ಎಂದು ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಹೇಳಿದ್ದಾರೆ.
ರಾಮಕ್ಷತ್ರಿಯ ಸೇವಾ ಸಂಘ(ರಿ) ಮಂಗಳೂರು ಇದರ ನೇತೃತ್ವದಲ್ಲಿ ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್ ನಲ್ಲಿ ‘‘ಕ್ಷಾತ್ರ ಸಂಗಮ-3’’ ರಾಮಕ್ಷತ್ರಿಯರ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಕಾರ್ಯ ಕ್ರಮ ಕ್ಷತ್ರಿಯ ಸಂಗಮದ ಹೆಗ್ಗುರುತು ಆಗಿದೆ. ರಾಮಕ್ಷತ್ರಿಯ ಸಮಾಜ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಒಗ್ಗೂಡಬೇಕು,ಇದು ಇಲ್ಲಿಗೆ ಮಾತ್ರ ನಿಲ್ಲದೆ ಪ್ರತಿ ಜಿಲ್ಲೆಯಲ್ಲಿ ಕ್ಷಾತ್ರ ಸಂಗಮ ನಡೆಸಿ ಒಗ್ಗೂಡಿಸಬೇಕು. ಕ್ಷಾತ್ರ ಸಂಗಮ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ವಾಗ್ಮಿ ಶ್ರೀಕಾಂತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದ ರಕ್ಷಣೆಗೆ ಯಾರು ನಿಲ್ಲತ್ತಾನೋ ಅವನು ಕ್ಷತ್ರಿಯ. ರಾಮ - ಕ್ಷತ್ರಿಯ ಪರಾಕ್ರಮದ ಸಂಗಮ ಎಂದು ಹೇಳಿದರು
ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾದ ಸಿ.ಚ್ ಮುರಳಿಧರ್,ಯೋಗಿಶ್ ಜೆಪ್ಪು,ವಿನೋದ್ ಕುಮಾರ್,ಅನಂತ ಪದ್ಮನಾಭ, ಸಂದೀಪ್ ಜೆ,ರಾಘವೇಂದ್ರ ರಾವ್,ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಸುರೇಶ್ ರಾವ್,ದಿನೇಶ್,ಸಂಘದ ಅಂತರಿಕ ಲೆಕ್ಕಪರಿಶೋಧಕ ಶಿವಪ್ರಸಾದ್ ರವರು ಉಪಸ್ಥಿತರಿದ್ದರು.
ಜೆ.ಕೆ ರಾವ್ ಸ್ವಾಗತಿಸಿದರು. ಯೋಗೀಶ್ ಕುಮಾರ್ ಜೆಪ್ಪುಪ್ರಾಸ್ತಾವಿಕವಾಗಿ ಮಾತನಾಡಿದರು.