ತಂತ್ರಜ್ಞಾನ ಭಾಷಾ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕಾಗಿದೆ: ಗಿರೀಶ್ ರಾವ್
ಮಂಗಳೂರು,ಫೆ.22 (ಬಿಎಂ.ಇದಿನಬ್ಬ ವೇದಿಕೆ);ತಂತ್ರಜ್ಞಾನ ಕನ್ನಡದ ಬೆಳವಣಿಗೆಗೆ ಪೂರಕವಾಗಿ ಬಳಸಿ ಕೊಳ್ಳಬೇ ಕಾಗಿದೆ, ಬದಲಾವಣೆ ಯೊಂದಿಗೆ ಬಂದ ತಂತ್ರಜ್ಞಾನ ಭಾಷೆಯ ವಿಸ್ತರಣೆ ಗೆ ಅಗಾಧ ಅವಕಾಶವನ್ನು ಒದಗಿಸಿದೆ ಎಂದು ಗಿರೀಶ್ ರಾವ್( ಜೋಗಿ) ತಿಳಿಸಿದ್ದಾರೆ.
ಅವರು ಶನಿವಾರ ಮಂಗಳೂರು ವಿಶ್ವ ವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ಫೆ. 21 ಮತ್ತು 22 ರವರೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 27 ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.
ಇತ್ತೀಚಿನ ಬದಲಾವಣೆ ಕನ್ನಡ ಭಾಷೆಗೆ ಶತ್ರುವಾಗಿ ಕಂಡರು ಆಧುನಿಕ ತಂತ್ರಜ್ಞಾನದ ಲ್ಲಾಗಿರುವ ಬದಲಾವಣೆ ಸಾಕಷ್ಟು ಅವಕಾಶಗಳನ್ನು ನೀಡಿದೆ.ಆಸಕ್ತರಿಗೆ ಸಾಹಿತ್ಯ ರಚಿಸಿ ಅದನ್ನು ಪ್ರಸರಣ ಮಾಡುವ ವೇದಿಕೆಯನ್ನು ಸೃಷ್ಟಿಸಿದೆ.ಮೊಬೈಲ್ ನಲ್ಲೂ ಭಾಷೆಯನ್ನು ಹೇಗೆ ಬಳಸಬೇಕು ಎಂದು ತಿಳಿಸುವ ತಂತ್ರಜ್ಞಾನ ನಮ್ಮ ಮುಂದಿದೆ. ಕನ್ನಡ ಭಾಷೆಯ ಬೆಳವಣಿಗೆ ಎಂದರೆ ಎಲ್ಲಾ ದೃಷ್ಟಿ ಕೋನದಿಂದಲೂ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ಗಿರೀಶ್ ರಾವ್ ತಿಳಿಸಿದ್ದಾರೆ.
ಒಂದು ಲೇಖಕ ತನ್ನ ಭಾಷೆ ಸಾಹಿತ್ಯದ ಮೂಲಕ ಇಡೀ ನಾಡನ್ನು ಸಂಚರಿಸುವ ಶಕ್ತಿಹೊಂದಿರುತ್ತಾನೆ.ಆದುದರಿಂದ ಕುವೆಂಪು, ಬೇಂದ್ರೆ ಯಂತಹ ಕವಿಗಳು ತಮ್ಮ ಪ್ರದೇಶಗಳಿಗೆ ಸೀಮಿತವಾಗದೆ ಇಡೀ ನಾಡನ್ನು ಆವರಿಸಿಕೊಂಡಿದಗದರು. ಅದು ಭಾಷೆಯ ಶಕ್ತಿಯಾಗಿದೆ.ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಓದುವ ಸರಳವಾದ ಅವರನ್ನು ಚಿಂತನೆಗೆ ಹಚ್ಚುವ ಸಾಹಿತ್ಯದ ಅಗತ್ಯವಿದೆ ಎಂದು ಗಿರೀಶ್ ರಾವ್ ತಿಳಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿದ ಆಳ್ವಾಸ್ ವಿದ್ಯಾ ಸಂಸ್ಥೆಯ ಮೋಹನ್ ಆಳ್ವ ಮಾತನಾ ಡುತ್ತಾ, ಕನ್ನಡದ ಸರಕಾರಿ ಶಾಲೆಗಳು ಸಿಬಿಎಸ್ ಸಿ,ಐಸಿಎಸ್ ಮಟ್ಟದ ಮಾದರಿ ಶಾಲೆಗಳಾಗಿ ರೂಪಿಸ ಬೇಕಾಗಿದೆ. ಮೊದಲು ಕನ್ನಡ ಮಾಧ್ಯಮ ಶಾಲೆಗಳ ಗುಣ ಮಟ್ಟ ಹೆಚ್ಚಿಸಿ ಅವುಗಳನ್ನು ಉಳಿಸಬೇಕಾಗಿದೆ.ಈ ಕೆಲಸ ಕ್ರೀಯಾ ರೂಪಕ್ಕಿಳಿಯಬೇಕು.ಅಂತಹ ಮಾದರಿ ಶಾಲೆಗಳನ್ನು ಮೂಡಬಿದಿರೆಯಲ್ಲಿ ಮಾಡಿದ್ದೇನೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸರಕಾರದ ಇಚ್ಛಾ ಶಕ್ತಿ ಇದ್ದರೆ ಇದು ಸಾಧ್ಯ ಎಂದರು.
ಸರ್ವಾಧ್ಯಕ್ಷ ಡಾ.ಬಿ.ಪ್ರಭಾಕರ ಶಿಶಿಲ ಅಧ್ಯಕ್ಷ ತೆ ವಹಿಸಿದ್ದರು, ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ಮಾತನಾಡುತ್ತಾ, ವಿದ್ಯಾರ್ಥಿ ಗಳ ಭಾಗವಹಿಸುವಿಕೆ ಭವಿಷ್ಯದ ಭರವಸೆ ಯಾಗಿದೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಮಂದಿ ಸಾಧಕರಿಗೆ ಒಂದು ಸಂಸ್ಥೆಗೆ ಸನ್ಮಾನದ ಗೌರವ ನೀಡಲಾಯಿತು. ಸನ್ಮಾನಿತರು ;-ಉಡುಪಿಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಪಾವೂರು, ಕಾದಂಬರಿಕಾರ ಡಾ. ಪ್ರಭಾಕರ ನೀರುಮಾರ್ಗ, ಮಂಗಳೂರು; ಸಾಮಾಜಿಕ ಮುಖಂಡ ವೆಂಕಪ್ಪ ಕಾಜವ ಮಿತ್ತಕೋಡಿ, ಮುಡಿಪು; ಕಲಾವಿದ ಎಂ.ಜಿ.ಕಜೆ, ಸುಳ್ಯ; ಲೇಖಕ ಪರಮಾನಂದ ಸಾಲಿಯಾನ್, ಮೂಲ್ಕಿ; ಪತ್ರಕರ್ತ ಧನಂಜಯ ಮೂಡಬಿದಿರೆ; ವರ್ಣಚಿತ್ರ ಕಲಾವಿದ ಮೋನಪ್ಪ, ಪುತ್ತೂರು; ಶಿಕ್ಷಕರು ಮತ್ತು ಕ್ರೀಡಾಪಟು ಪ್ರೇಮಾಗೌಡ, ಕಡಬ; ಕರಾವಳಿಯ ಪಾರಂಪರಿಕ ವಸ್ತುಸಂಗ್ರಹಕಾರರಾಗಿರುವ ಶಶಿಕುಮಾರ್ ಭಟ್ ಪಡಾರು, ವಿಟ್ಲ; ಜಲ ಸಂವರ್ಧನ ತಜ್ಞ ಡಾ. ಜೋಸೆಫ್ ಎನ್ ಎಮ್, ಬೆಳ್ತಂಗಡಿ; ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ತೊಕ್ಕೊಟ್ಟು, ಮಂಗಳೂರು; ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಬಿತ ಕೊರಗ, ಕೊಣಾಜೆ ಇವರನ್ನು ಸನ್ಮಾನಿಸಲಾ ಗುವುದು. ಗಡಿನಾಡಿನಲ್ಲಿ ಕನ್ನಡ ವಿಸ್ತರಣೆಯ ಸೇವೆಗಾಗಿ ನಿರಂಜನರ ಕಾದಂಬರಿಗಳ ಮಲಯಾಳ ಅನುವಾದಕರಾಗಿರುವ ಪಯ್ಯನ್ನೂರು ಕುಂಞ್ಞಿರಾಮನ್ ಮಾಸ್ತರ್ ಮತ್ತು ಸಂಸ್ಥೆಗಳಿಗೆ ನೀಡುವ ಗೌರವಕ್ಕೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀ ನಾಥ್ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಉಳ್ಳಾಲ ತಾಲೂಕು ಕಸಾಪ ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ,ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಉಪಸ್ಥಿತರಿದ್ದರು.
ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು, ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು.