ಮುಡಿಪುವಿನಲ್ಲಿ ಟೆಂಪೋ ಪಾರ್ಕ್ ನಿರ್ಮಿಸಲು ಒತ್ತಾಯಿಸಿ ಮನವಿ
ಬಾಳೆಪುಣಿ: ಮುಡಿಪುವಿನಲ್ಲಿ ಟೆಂಪೋ ಪಾರ್ಕ್ ನಿರ್ಮಿಸಲು ಒತ್ತಾಯಿಸಿ ಬಾಳೆಪುಣಿ ಗ್ರಾಮ ಪಂಚಾಯತ್ ಗೆ ಟೆಂಪೋ ಮಾಲಕರು ಮತ್ತು ಚಾಲಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಬಾಳೆಪುಣಿ ಗ್ರಾಮಕ್ಕೊಳಪಟ್ಟ ಮುಡಿಪು ಪ್ರದೇಶದಲ್ಲಿ ಕುರ್ನಾಡು ಗ್ರಾಮ ಪಂಚಾಯತಿನ ತ್ಯಾಜ್ಯ ವಿಲೇವಾರಿ ಘಟಕ ಕಳೆದ 15 ವರ್ಷಗಳಿಂದ ರಸ್ತೆಗೆ ತಾಗಿಕೊಂಡು ಕಾರ್ಯನಿರ್ವಹಿಸುತ್ತಿತ್ತು.ಈ ಕಾರಣದಿಂದ ನಮ್ಮ ಎಲ್ಲಾ ಟೆಂಪೊಗಳನ್ನು ರಸ್ತೆಗೆ ತಾಗಿಕೊಂಡು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡುತ್ತಿದ್ದ ಕಾರಣ ಸಾರ್ವಜನಿಕರು ಹಲವಾರು ರೀತಿಯಲ್ಲಿ ತೊಂದರೆ ಗಳನ್ನು ಅನುಭವಿಸುತ್ತಿದ್ದರು. ಮುಖ್ಯ ರಸ್ತೆಯೂ ಆಗಿರುವುದರಿಂದ ವಾಹನಗಳಿಗೂ ತೊಂದರೆಯಾಗುತ್ತಿತ್ತು. ಇಲ್ಲಿನ ಎಲ್ಲಾ ಟೆಂಪೋ ಮಾಲಕರು ಹಾಗೂ ಚಾಲಕರು ಸುಮಾರು ಹದಿನೈದು ವರ್ಷಗಳಿಂದ ಇದೇ ಪ್ರದೇಶದಲ್ಲಿ ದುಡಿಯುತ್ತಿದ್ದಾರೆ. ಮಡಿಪು ಜಂಕ್ಷನ್ ನಲ್ಲಿ ಟೆಂಪೊ ನಿಲ್ಲಿಸಲು ಸರಿಯಾದ ಜಾಗವಿಲ್ಲ. ಒಟ್ಟು ಟೆಂಪೊ ಚಾಲಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ರಸ್ತೆ ಬದಿಯಲ್ಲಿದ್ದ ತ್ಯಾಜ್ಯ ಘಟಕವು ಈಗಾಗಲೇ ತೆರವುಗೊಂಡಿದೆ. ತೆರವುಗೊಂಡ ಜಾಗದಲ್ಲಿ ಯಾವುದೇ ಅಡೆತಡೆ ಇಲ್ಲದೆ ಟೆಂಪೊಗಳನ್ನು ಪಾರ್ಕ್ ಮಾಡಬಹುದಾಗಿದೆ. ಹಾಗಾಗಿ ತ್ಯಾಜ್ಯ ಘಟಕ ತೆರವುಗೊಂಡ ಪ್ರದೇಶದಲ್ಲಿ ಟೆಂಪೋ ಪಾರ್ಕ್ ನಿರ್ಮಾಣ ಮಾಡಿಕೊಡಬೇಕೆಂದು ಬಾಳೆಪುಣಿ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಟೆಂಪೊ ಮಾಲಕರ ಮತ್ತು ಚಾಲಕರ ಸಂಘ ಮುಡಿಪು ಬಾಳೆಪುಣಿ ಇದರ ಅಧ್ಯಕ್ಷರಾದ ಸಿದ್ದೀಕ್ ಕೈರಂಗಳ, ಕಾರ್ಯದರ್ಶಿ ಝಿಯಾದ್ CH, ಕೋಶಾಧಿಕಾರಿ ಇಸ್ಮಾಯಿಲ್ ಬಶರ, ಅಬ್ದುಲ್ ರಹಿಮಾನ್, ಶಾಫಿ, ಯಾಸಿರ್, ಫತ್ತಾಹ್, ರಫೀಕ್, ಸಂಘದ ಗೌರವ ಸಲಹೆಗಾರರಾದ ರಝಾಕ್ ಮುಡಿಪು, ಅಬೂಬಕ್ಕರ್ ಜಲ್ಲಿ ಉಪಸ್ಥಿತರಿದ್ದರು.