ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನಲ್ಲಿ 'ಲೇಖಕರ ಸಮ್ಮಿಲನ'
ಪುತ್ತೂರು, ಮಾ.1: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ 25ನೇ ವಾರ್ಷಿಕದ ಅಂಗವಾಗಿ ಬುಧವಾರ ಮರ್ಕಝುಲ್ ಹುದಾ ಕ್ಯಾಂಪಸ್ ನಲ್ಲಿ 'ಲೇಖಕರ ಸಮ್ಮಿಲನ' ಕಾರ್ಯಕ್ರಮ ಸಮ್ಮಿಲನ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ಶಂಶೀರ್ ಬುಡೋಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತ ಹಂಝ ಮಲಾರ್ ವಿಷಯ ಮಂಡಿಸಿದರು. ಲೇಖಕ ಇಸ್ಮತ್ ಫಜೀರ್ ಚರ್ಚೆಯನ್ನು ನಿರ್ವಹಿಸಿದರು. ಈ ಸಂದರ್ಭ ಮುಂದಿನ ಶೈಕ್ಷಣಿಕ ವರ್ಷದಿಂದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ನಲ್ಲಿ ಆರಂಭವಾಗುವ ಪ್ಯಾರಾ ಮೆಡಿಕಲ್ ಕೋರ್ಸ್ ನ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಕೋಶಾಧಿಕಾರಿ ಯೂಸುಫ್ ಗೌಸಿಯ ಸಾಜ, ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ಅಬೂಬಕರ್ ಅನಿಲಕಟ್ಟೆ ವಿಟ್ಲ, ಕವಿ ಸಲೀಂ ಮಾಣಿ, ಲೇಖಕ ಎ.ಕೆ.ನಂದಾವರ, ಪತ್ರಕರ್ತ ಹಮೀದ್ ಪುತ್ತೂರು, ಅನ್ವರ್ ಹುಸೈನ್ ಗೂಡಿನಬಳಿ, ಹುಸೈನ್ ಸಅದಿ ಹೊಸ್ಮಾರ್, ಅಬ್ದುಲ್ಲತೀಫ್ ನೇರಳಕಟ್ಟೆ, ಫಾರೂಕ್ ವಿದ್ಯಮಾನ, ಯೂಸುಫ್ ನಬ್ಹಾನಿ ಕುಕ್ಕಾಜೆ, ಕೆ.ಎ.ಅಬ್ದುಲ್ ಅಝೀಝ್ ಝುಹ್ರಿ ಪುಣಚ ರಂಶೀದ್ ಸಖಾಫಿ, ಸ್ವಲಾಹ್ ಕುತ್ತಾರ್, ಬಿ.ಕೆ.ಸ್ವಾದಿಕಲಿ ಸಂಪ್ಯ, ಯೂಸುಫ್ ರೆಂಜಲಾಡಿ, ಹೈದರಲಿ ಐವತ್ತೊಕ್ಲು, ಹಮೀದ್ ಕೂರ್ನಡ್ಕ ಚರ್ಚೆಯಲ್ಲಿ ಪಾಲ್ಗೊಂಡರು.
ಮರ್ಕಝುಲ್ ಹುದಾ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಕೆ.ರಶೀದ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.