×
Ad

ಮಾನವೀಯತೆಯನ್ನು ಎತ್ತಿಹಿಡಿಯಲು ರಂಗಭೂಮಿ ಪ್ರಬಲ ಮಾಧ್ಯಮ: ಪಾರ್ವತಿ ತಿರುವೊತ್ತು

Update: 2025-03-03 22:31 IST

ಮಂಗಳೂರು: ಮಾನವೀಯತೆಯನ್ನು ಎತ್ತಿಹಿಡಿಯಲು ರಂಗಭೂಮಿ ಪ್ರಬಲ ಮಾಧ್ಯಮವಾಗಿದೆ ಎಂದು ಬಹು ಬಾಷಾ ನಟಿ ಪಾರ್ವತಿ ತಿರುವೊತ್ತು ತಿಳಿಸಿದ್ದಾರೆ.

ಅವರು ಸೋಮವಾರ ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾ ನಿಲಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ದ್ವಿತೀಯ ವರ್ಷದ ʼನಿರ್ದಿಗಂತ ಉತ್ಸವ 2025ʼದ ಸಮಾರೋಪ ಸಮಾರಂಭ ದವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಂಗಭೂಮಿಯ ಶಕ್ತಿಯ ಬಗ್ಗೆ ಅರಿವು ಮೂಡಿಸುವ ನಿರ್ದಿಗಂತದ ಪ್ರಯತ್ನ ಶ್ಲಾಘನೀಯ. ನಮ್ಮ ಸುತ್ತ ಮುತ್ತಲಿನಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರೀತಿಯ ಭಾಷೆಯ ಮೂಲಕ ಸಾಗಬೇಕಾಗಿದೆ. ಸೌಹಾರ್ದತೆಯ ಮೂಲಕ ಸಾಗಬೇಕಾಗಿದೆ ಹೋರಾಡಬೇಕಾಗಿದೆ. ಈ ಹಾದಿಯಲ್ಲಿ ನಾವು ಒಬ್ಬಂಟಿಗಳಾಗಿಯಲ್ಲ ವಿದ್ಯಾರ್ಥಿಗಳು ಯುವ ಜನರು ಎಲ್ಲರೂ ಜೊತೆಯಾಗಿ ಸಾಗಬೇಕಾಗಿದೆ ಸತ್ಯವನ್ನು ಹೇಳ ಬೇಕಾಗಿದೆ ಎಂದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ನಾತನಾಡುತ್ತಾ ಕರಾವಳಿಯ ಸೌಹಾರ್ದ ತೆ ಧ್ಯೇಯದ ಹೆಸರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ವಿವಿಧ ಸಂಸ್ಕೃತಿಗಳ ಸಂಗಮ ವಾಗಿದೆ ಮುಂದೆಯೂ ಇಂತಹ ಉತ್ಸವಗಳು ನಡೆಯಲಿ ಎಂದು ಶುಭ ಹಾರೈಸಿದರು.

ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡುತ್ತಾ ಸೌಹಾರ್ದ ತೆಯನ್ನು ಅರ್ಥಮಾಡಿ ಕೊಳ್ಳುವ ಸಂಭ್ರಮಿಸುವ ಕೆಲಸ ಈ ಉತ್ಸವದ ಮುಖ್ಯ ಉದ್ದೇಶ. ನಿರ್ದಿಂಗತದ ಆಶಯ ನಾವೆಲ್ಲರೂ ಸೇರಿ ಮುಂದಿನ ತಲೆ ಮಾರಿಗೆ ಹೊಸ ಚೈತನ್ಯ ಮೂಡಿಸುವ ಚಿಂತನೆ ಮೂಡಿಸಬೇಕಾಗಿದೆ. ಹೊಸತನ್ನು ಹುಡುಕುವ ಕೆಲಸ ನಿರ್ದಿಂಗತ ಉತ್ಸವದಲ್ಲಿ ನಡೆದಿದೆ. ರಂಗ ಶಿಕ್ಷಣದ ಸೂಕ್ಷ್ಮ ತೆಗಳನ್ನು ಕಟ್ಟಿಕೊಳ್ಳಲು ರಂಗ ಭೂಮಿಯ ಶಕ್ತಿಯನ್ನು ಮೊದಲು ನಾವು ಅರ್ಥ ಮಾಡಿ ಕೊಳ್ಳಬೇಕಾಗಿದೆ ಎಂದರು.

ಶಿಕ್ಷಣ ದಲ್ಲಿ ರಂಗಭೂಮಿಯ ವಿಚಾರಗಳು ಒಳಗೊಳ್ಳಬೇಕಾಗಿದೆ.ವಿದ್ಯಾರ್ಥಿ ಗಳಲ್ಲಿ ಆತ್ಮ ವಿಶ್ವಾಸ ವನ್ನು ಮೂಡಿಸುವ ಕೆಲಸ,ಸೂಕ್ಷ್ಮ ವನ್ಬು ಅರ್ಥಮಾಡಿಕೊಳ್ಳಲು, ವೈಜ್ಞಾನಿಕ ಚಿಂತನೆ ಮೂಡಿಸಲು ರಂಗ ಶಿಕ್ಷಣ ಪೂರಕವಾಗಬೇಕಾಗಿದೆ ಎಂದರು.

ಕಾಲೇಜಿನ ಆವರಣದ ಬಯಲು ರಂಗವೇದಿಕೆಯಲ್ಲಿ ಅಲೋಶಿಯಸ್ ಕಾ ಈಶಾನ್ಯ ಭಾರತದ ವಿದ್ಯಾರ್ಥಿ ಗಳ ಹಾಡು, ಮಿಝೋರಾಂನ ಬಿದಿರಿನ ನೃತ್ಯ,ಸಿದ್ದಿ ಜನಾಂಗ ದವರ ನೃತ್ಯ ,ಬ್ರಾಸ್ ಬ್ಯಾಂಡ್ ವೇಷ ಕುಣಿತ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News