ಗಾಂಜಾ ಸೇವನೆ ಆರೋಪ: ಇಬ್ಬರ ಸೆರೆ
Update: 2025-03-06 20:35 IST
ಮಂಗಳೂರು: ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿರುವ ಬಂದರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನಗರದ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿದ ಆರೋಪದಡಿ ಪಡುಪಣಂಬೂರು ನಿವಾಸಿ ಅನೀಶ್ ಭಂಡಾರಿ (30) ಮತ್ತು ಸೆಂಟ್ರಲ್ ಮಾರ್ಕೆಟ್ ಬಳಿ ಅಮಲು ಪದಾರ್ಥ ಸೇವಿಸಿದ ಆರೋಪದಡಿ ಪಾಂಡೇಶ್ವರ ನಿವಾಸಿ ಜಾಗ್ರತ್ (20) ಎಂಬಾತನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.