ಉಳ್ಳಾಲ ಸಯ್ಯಿದ್ ಮದನಿ ಶರೀಅತ್ ಕಾಲೇಜಿನ ಎಂಎಫ್‌ಎಂ ಪದವಿ ಫಲಿತಾಂಶ ಪ್ರಕಟ
ಉಳ್ಳಾಲ : ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಅಧೀನದ ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಯ್ಯಿದ್ ಮದನಿ ಶರೀಅತ್ ಕಾಲೇಜಿನ ಮುತವ್ವಲ್ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟನೆಗೊಂಡಿರುತ್ತದೆ.
ಕಾಲೇಜಿನ ಪ್ರಾಂಶುಪಾಲರಾದ ಉಸ್ತಾದ್ ಅಹ್ಮದ್ ಕುಟ್ಟಿ ಸಖಾಫಿ ನೆಲ್ಲಿಕುತ್ತು ಅವರು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಪ್ರಥಮ ಸ್ಥಾನವನ್ನು ಸಯ್ಯಿದ್ ಸಅದ್ ಜಮಲುಲ್ಲೈಲಿ ಕೊಳಪ್ಪುರಂ, ದ್ವಿತೀಯ ಸ್ಥಾನವನ್ನು ಜಮಾಲುದ್ದೀನ್ ಮುಡಿಪು,ತೃತೀಯ ಸ್ಥಾನವನ್ನು ಹಾಫಿಳ್ ಸಿನಾನ್ ಉಳ್ಳಾಲ ಗಳಿಸಿರುತ್ತಾರೆಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಪ್ರಸ್ತುತ ವರ್ಷದಲ್ಲಿ ಮುತವ್ವಲ್ ಅಧ್ಯಯನವನ್ನು ಪೂರ್ಣಗೊಳಿಸಿ ಹೊರಬರುವ ಮದನಿ ಪಂಡಿತರಿಗೆ ಸ್ಥಾನ ವಸ್ತ್ರ ವಿತರಣೆ ಮತ್ತು ಎಂಎಫ್ ಎಂ ( ಮೌಲವಿ ಫಾಲಿಲ್ ಮದನಿ) ಸನದ್(ಪದವಿ) ದಾನವನ್ನು ಉಳ್ಳಾಲ ಖಾಝಿ ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಸಯ್ಯಿದ್ ಮದನಿ ಉರೂಸ್ ವೇದಿಕೆಯಲ್ಲಿ ನಡೆಸಲಾಗುವುದು.
ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ , ಪ್ರೊಫೆಸರ್ಸ್ ಗಳಾದ ಇಬ್ರಾಹಿಂ ಅಹ್ಸನಿ ಮಂಜನಾಡಿ, ನಜೀಬ್ ನೂರಾನಿ ಮತ್ತು ನುಹ್ಮಾನ್ ನೂರಾನಿ ವಿಜೇತರನ್ನು ಶುಭ ಹಾರೈಸಿದ್ದಾರೆ.
ಭಾಷಾ ಅಧ್ಯಯನ, ಲೈಫ್ ಸ್ಕಿಲ್ ತರಬೇತಿ, ಕಂಪ್ಯೂಟರ್ ಕೋರ್ಸ್‌ಗಳು ಸೇರಿದಂತೆ ಎರಡು ವರ್ಷಗಳ ಮುತವ್ವಲ್ ಕೋರ್ಸ್‌ಗೆ ಪ್ರವೇಶಾತಿ ಮುಂದುವರೆದಿದೆ. ಮುಖ್ತಸರ್ ತರಗತಿಯನ್ನು ಪೂರ್ಣ ಗೊಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: +91 9846381279, +91 94834 56174, +91 94488 74216, 9241196101 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.