×
Ad

ಚಪ್ಪಾರಪಡವು ಜಾಮಿಅ: ಇರ್ಫಾನಿಯ್ಯಾ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

Update: 2025-03-11 18:38 IST

ಮಂಗಳೂರು, ಮಾ.11: ಪ್ರಸಕ್ತ (2024-25ನೆ) ಶೈಕ್ಷಣಿಕ ವರ್ಷದ ಮೌಲವಿ ಫಾಝಿಲ್ ಇರ್ಫಾನಿ ಹಾಗೂ ತಖಸ್ಸುಸ್ ಸ್ನಾತಕೋತ್ತರ ಕರ್ಮಶಾಸ್ತ್ರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

ತಖಸ್ಸುಸ್ ಕರ್ಮಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಮಸೂದ್ ಇರ್ಫಾನಿ ಸಾಲ್ಮರ ಮತ್ತು ದ್ವೀತಿಯ ಸ್ಥಾನವನ್ನು ಬಿಲಾಲ್ ಇರ್ಫಾನಿ ವಿಟ್ಲ ತನ್ನದಾಗಿಸಿಕೊಂಡಿದ್ದಾರೆ. ಕೇರಳದ ಮುಹಮ್ಮದ್ ಇರ್ಫಾನಿ ತೃತೀಯ ಸ್ಥಾನ ಗಳಿಸಿದ್ದಾರೆ.

ಮುತವ್ವಲ್ ಕೋರ್ಸಿನಲ್ಲಿ ಅಜ್ಮಲ್ ಮಾಟ್ಟೂಲ್, ಮುಖೀತ್ ಮೇಲಾಟೂರ್, ಅಸ್ಕರ್ ಇರಿಕ್ಕೂರ್, ಸಲ್ಮಾನ್ ಬೆಂಗ್ರೆ ಕ್ರಮನುಸಾರವಾಗಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಸೂಫಿವರ್ಯ ಶೈಖುನಾ ಚಪ್ಪಾರಪಡವು ಉಸ್ತಾದ್‌ರ ನೇತೃತ್ವದಲ್ಲಿ ಚಪ್ಪಾರಪಡವು ಜಾಮಿಅ ಇರ್ಫಾನಿಯ್ಯಾ ಅರಬಿಕ್ ಕಾಲೇಜು ಕಾರ್ಯಾಚರಿಸುತ್ತಿದೆ. ಮುಖ್ತಸರ್ ಹಾಗೂ ಮುತವ್ವಲ್ ಕೋರ್ಸಿನ ಸೆಲೆಕ್ಷನ್ ಬಯಸುವ ವಿದ್ಯಾರ್ಥಿಗಳು ರಮಝಾನ್ ನಂತರ ಎಪ್ರಿಲ್ 11ಕ್ಕೆ ಪ್ರವೇಶಾತಿ ಪರೀಕ್ಷೆ ನಡೆಯ ಲಿದೆ. ರಮಝಾನ್ ರಜೆಯ ನಂತರ ಶೈಕ್ಷಣಿಕ ವರ್ಷದ ಅಧ್ಯಯನವು ಎಪ್ರಿಲ್ 10ಕ್ಕೆ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News