×
Ad

ಯುವನಿಧಿ ಯೋಜನೆ: ತ್ರೈಮಾಸಿಕ ಸ್ವಯಂ ಘೋಷಣೆಗೆ ಅವಕಾಶ

Update: 2025-03-25 20:16 IST

ಉಡುಪಿ, ಮಾ.25: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಡಿ ಯಲ್ಲಿ 3,000 ರೂ. (ಪದವಿ) ಹಾಗೂ 1,500 ರೂ. (ಡಿಪ್ಲೋಮಾ) ಭತ್ಯೆಯನ್ನು ಪಡೆಯುತ್ತಿರುವ ಜಿಲ್ಲೆಯ ಫಲಾನುಭವಿ ಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡುತ್ತಿದ್ದು, ಇನ್ನು ಮುಂದೆ ತ್ರೈಮಾಸಿಕ (ಮೂರು ತಿಂಗಳಿಗೊಮ್ಮೆ) ಸ್ವಯಂ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ತ್ರೈಮಾಸಿಕವಾಗಿ ದಾಖಲಿಸಲಾಗುವ ಸ್ವಯಂ ಘೋಷಣೆಯಲ್ಲಿ ಪ್ರತಿ ತಿಂಗಳ ನಿರುದ್ಯೋಗದ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News