×
Ad

ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘಕ್ಕೆ ವಂಚನೆ ಆರೋಪ: ಪ್ರಕರಣ ದಾಖಲು

Update: 2025-04-03 20:44 IST

ಪಣಂಬೂರು: ಇಲ್ಲಿನ ಬೈಕಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ಮುಖ್ಯ ಕಚೇರಿಗೆ ಲಕ್ಷಾಂತರ ರೂ. ಮೋಸ ಮಾಡಿರುವ ಕುರಿತು ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸತ್ಯನಾರಾಯಣ ರಾಮಚಂದ್ರ ಭಟ್‌ (55) ಎಂಬಾತ 29,51,987 ರೂ. ವಂಚಿಸಿರುವುದಾಗಿ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ದೂರು ದಾಖಲಿಸಿದೆ.

ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ಸಂಸ್ಥೆಯು ಮಂಗಳೂರು ಮತ್ತು ಇತರ ಕಡೆಗಳಲ್ಲಿ ಅಡಿಕೆ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುತ್ತಿದೆ. ಆರೋಪಿ ಸತ್ಯನಾರಾಯಣ ರಾಮಚಂದ್ರ ಭಟ್‌ ಗುಜರಾತ್ ನ ಅಹಮದಾಬಾದ್ ನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, 2009ರಲ್ಲಿ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘದಿಂದ ಆರೋಪಿಯು 3,06,5565 ಮೌಲ್ಯದ ಅಡಿಕೆಯನ್ನು ಖರೀದಿಸಿದ್ದ. ಇದರಲ್ಲಿ 1,13,578 ರೂ. ಹಣವನ್ನು ಪಾವತಿಸಿದ್ದು, ಉಳಿದ 29,51,987 ರೂ. ಪಾವತಿಸದೆ ಸಂಸ್ಥೆಗೆ ವಂಚಿಸಿ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದೆ.

ಆರೋಪಿಯ ವಿರುದ್ಧ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News