ಅರಸ್ತಾನ ಮದ್ರಸ ವಿದ್ಯಾರ್ಥಿಗಳಿಂದ ಸ್ವಚ್ಛತಾ ಆಂದೊಲನ
Update: 2025-04-24 20:25 IST
ಕೊಣಾಜೆ: ಅಲ್‌ಮುಬಾರಕ್ ಜುಮಾ ಮಸೀದಿ ಮಲಾರ್ ಅರಸ್ತಾನ ಇದರ ಅಧೀನದಲ್ಲಿರುವ ಹಯಾತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಖಓಖಆ್ಖ ವತಿಯಿಂದ ಮಹಾತ್ಮಗಾಂಧಿಯ ಕನಸಿನ ಭಾರತ ಸ್ವಚ್ಛ್ ಭಾರತ್ ಭಾಗವಾಗಿ ಮಲಾರ್ ರಸ್ತೆ ಬದಿಯಲ್ಲಿದ್ದ ತ್ಯಾಜ್ಯಾ ಕಸಕಡ್ಡಿಗಳನ್ನು ಹೆಕ್ಕುವ ಮೂಲಕ ಸ್ವಚ್ಛತಾ ಆಂದೊಲನ ನಡೆಸಲಾಯಿತು.
ಮಸೀದಿಯ ಖತೀಬ್ ಮುಹಮ್ಮದ್ ಶಫೀಕ್ ಅಲ್-ಫಾಳಿಲ್ ಕೌಸರಿ, ಹಯಾತುಲ್ ಇಸ್ಲಾಂ ಮದ್ರಸದ ಪ್ರಧಾನ ಅಧ್ಯಾಪಕ ಮುಹಮ್ಮದ್ ಶಹೀರ್ ಅಲ್-ಫಾಳಿಲ್ ಕೌಸರಿ, ಜಮಾಅತಿನ ಅಧ್ಯಕ್ಷ ಎಂ.ಪಿ ಅಬ್ದುರ‌್ರಹ್ಮಾನ್, ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೊ, ಅರಸ್ತಾನ ಜಮಾಅತಿನ ಉಪಾಧ್ಯಕ್ಷ ಯಹ್ಯಾ ಅರಸ್ತಾನ, ಜಮಾಅತಿನ ಜೊತೆ ಕಾರ್ಯದರ್ಶಿ ರಿಝ್ವಾನ್ ಮಲಾರ್, ಸದಸ್ಯ ಸಮದ್ ಜಿ. ಮತ್ತಿತರರು ಉಪಸ್ಥಿತರಿದ್ದರು.