×
Ad

ಸುಸ್ಥಿರ ಅಭಿವೃದ್ಧಿಗೆ ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಅಗತ್ಯ: ರಮೇಶ ಶೇಣವ

Update: 2025-04-25 18:11 IST

ಕೊಣಾಜೆ: ದೇಶದ ಸುಸ್ಥಿರ ಅಭಿವೃದ್ಧಿಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಜೋಪಾನವಾಗಿ ಬಳಸಿ ಸಂರಕ್ಷಿಸಿ ಸುಸ್ಥಿರತೆಯಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಅಗತ್ಯವೆಂದು ಜನಜೀವನ ಬಾಳೆಪುಣಿ ಇದರ ಅಧ್ಯಕ್ಷರಾದ ರಮೇಶ ಶೇಣವ ಹೇಳಿದರು.

ಪಿ.ಎ.ಇಂಜಿನಿಯರಿಂಗ್ ಕಾಲೇಜ್ ನ ಬಯೋಟೆಕ್ನಾಲೆಜಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ, ಪರಿಸರಕೋಶ ಮತ್ತು ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥ, ಕ್ಷೇತ್ರ ಭೇಟಿ, ಸಂವಾದ ಕಾರ್ಯ ಕ್ರಮದಲ್ಲಿ ಅವರು ಸುಸ್ಥಿರ ಅಭಿವೃಧ್ಧಿ ಕುರಿತು ಮಾತುಗಳನ್ನಾಡಿದರು.

ಉದ್ಯಮಿಗಳಾದ ರಾಧಕೃಷ್ಣ ರೈ ಉಮಿಯ ಅವರು, ಶೂನ್ಯ ಕಸ ನಿರ್ವಹಣೆ ವೈಯುಕ್ತಿಕ, ಕೌಟುಂಬಿಕ ಹಾಗೂ ಸಾಂಸ್ಥಿಕ ನೆಲೆಯಲ್ಲಿ ಮಾಡಿದ ಕಾರ್ಯಸಾಧನೆಯನ್ನು ಹಂಚಿಕೊಂಡರು.

ಪ್ರಾಧ್ಯಾಪಕರಾದ‌ ಪ್ರೊ.ಸಿ.ವಿ. ಪೂಜಾರ್, ಡಾ.ಕೃಷ್ಣ ಪ್ರಸಾದ್ ನೆಲ, ಜಲ,ಪರಿಸರ ಸಂರಕ್ಷಣೆ ಕಾರ್ಯ ವಿಧಾನ, ಕಾರ್ಯಸಾಧನೆಗಳ ಅನುಭವ ಹಂಚಿಕೊಂಡರು. ಜನ ಶಿಕ್ಷಣ ಟ್ರಸ್ಟ್ ತರಬೇತಿ ಕೇಂದ್ರದಲ್ಲಿ ಅಳವಡಿಸಿದ ಮಳೆ ನೀರು ಕೊಯಿಲು,ಜಲ ಮರುಪೂರಣ,ಸೌರ ಶಕ್ತಿ,ಎರೆಹುಳ ಗೊಬ್ಬರ ತಯಾರಿ ಘಟಕಗಳನ್ನು ವೀಕ್ಷಿಸಲಾಯಿತು. ಸುಸ್ಥಿರ ಅಭಿವೃಧ್ಧಿ ಸಾಧಿಸಿದ ಕಣಂತೂರಿನ ಪುಷ್ಪಾ ಕೇಶವ, ಶರ್ಮಿಳಾ ರವೀಂದ್ರ, ಶೇಖರ ಮಡಿವಾಳ ಹೂಹಾಕುವಕಲ್ಲುವಿನ ಜಯ, ಕಾವೇರಿಯವರ ಮನೆಗಳಿಗೆ ಭೇಟಿ ನೀಡಿ ಸುಸ್ಥಿರ ಅಭಿವೃಧ್ಧಿ ಮಾದರಿಗಳನ್ನು ವೀಕ್ಷಿಸಲಾಯಿತು.

ಚಂದ್ರಹಾಸ ಕಣಂತೂರು ಬಾಳೆಪುಣಿ ಪಂಚಾಯತ್ ಅಧ್ಯಕ್ಷೆ ಗೀತಾ ಭಂಡಾರಿ, ಪಿಡಿಒ ವೆಂಕಟೇಶ್, ಕಾರ್ಯದರ್ಶಿ ಆಯಿಷಾಬಾನು ಉಪಸ್ಥಿತರಿದ್ದರು.

ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಸಂವಾದ ಕ್ಷೇತ್ರ ಭೇಟಿ ಕಾರ್ಯಕ್ರಮ ನಿರ್ವಹಿಸಿದರು.ಪಜ್ಞಾ ಮುಟ್ಟಿನ ಕಪ್ ಮತ್ತು ಪರಿಸರ ಸ್ನಹಿ ಪ್ಯಾಡ್ ಬಳಕೆ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಿದರು. ಪ್ರಾದ್ಯಾಪಕರಾದಡಾ.ಪ್ರಶಾಂತ್ ಪೈ, ಲೈಲಾ ಜಸೀಲ, ಶೈನಿಮ್ಯಾತ್ಯು, ಡಾಮರೊನಲ್ಡ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ125ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News