×
Ad

ಶಿಕ್ಷಣ ಎನ್ನುವುದು ಬೆಳಕು, ಇದಕ್ಕೆ ಒತ್ತು ನೀಡಬೇಕು: ಮುಹಮ್ಮದ್ ಅಲಿ ಸಖಾಫಿ

Update: 2025-04-26 23:13 IST

ಉಳ್ಳಾಲ: ಅಲ್ಲಾಹನು ಜಾಸ್ತಿ ಇಷ್ಟ ಪಡುವುದು ಇಸ್ಲಾಮಿನ ಶಿಕ್ಷಣ ಬೋಧಿಸುವ ವೇದಿಕೆಯನ್ನಾಗಿದೆ. ಶಿಕ್ಷಣ ವಿದ್ಯಾರ್ಜನೆ ನಾವು ಮಾಡಬೇಕು. ಬೋಧಿಸಲು ಗುರುಗಳು ಬೇಕು. ಇದಕ್ಕೆ ಬೇಕಾದ ವ್ಯವಸ್ಥೆ ನಾವು ಮಾಡಬೇಕಾಗಿದೆ ಎಂದು ದಾರುಲ್ ಅಶ್ ಅರಿಯ್ಯ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ ಹೇಳಿದರು

ಅವರು ಖುತ್ ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಹೆಸರಿನಲ್ಲಿ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಅಧ್ಯಕ್ಷತೆಯಲ್ಲಿ ದರ್ಗಾ ವಠಾರದಲ್ಲಿ ನಡೆಯುವ 22 ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಶನಿವಾರ ಧಾರ್ಮಿಕ ಉಪನ್ಯಾಸ ನೀಡಿದರು.

ಇಸ್ಲಾಮಿಕ್ ಶಿಕ್ಷಣ ಇಲ್ಲಿ ಮಾತ್ರ ಇರುವುದಲ್ಲ.ಲೋಕದಲ್ಲಿ ಇದೆ. ಮದನಿ ತಂಙಳ್ ಉಳ್ಳಾಲ ಕೈ ಬಂದು ಮೊದಲು ಒತ್ತು ನೀಡಿದ್ದು ಶಿಕ್ಷಣಕ್ಕೆ.ಶಿಕ್ಷಣ ಒಂದು ಬೆಳಕಾಗಿದೆ. ಎರಡು ಶಿಕ್ಷಣ ನಮ್ಮಲ್ಲಿ ಇದ್ದರೆ ಸಮುದಾಯ ಅಭಿವೃದ್ಧಿ ಸಾಧ್ಯ. ಶಿಕ್ಷಣ ಬೆಳವಣಿಗೆಗೆ ತಾಜುಲ್ ಉಲಮಾ,ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅಡಿಪಾಯ ಹಾಕುವ ಮೂಲಕ ಯಶಸ್ಸು ಸಾಧಿಸಿದ್ದಾರೆ ಎಂದರು.

ನಮ್ಮ ಬದುಕಿನಲ್ಲಿ ಸಂತೋಷ್ ಇರಬೇಕು, ಇಹಲೋಕ ಕಾರ್ಯ ಇಸ್ಲಾಮಿನ ಚೌಕಟ್ಟು ಮೀರಬಾರದು. ಕೌಟುಂಬಿಕ ಬದುಕು ಸಂತಸದಲ್ಲಿ ಇರಬೇಕು. ಸಂತಸ, ಸಹನೆ, ಸೌಹಾರ್ದ ಬದುಕಿಗೆ ಇಸ್ಲಾಂ ಒತ್ತು ನೀಡಿದೆ ಎಂದರು.

ಜಿ.ಎಂ. ಕಾಮಿಲ್ ಸಖಾಫಿ ದುಆ ಹಾಗೂ ಧಾರ್ಮಿಕ ಪ್ರವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ , ಕಣಚೂರು ಮೆಡಿಕಲ್ ಕಾಲೇಜು ಚೇರ್ ಮ್ಯಾನ್ ಹಾಜಿ ಕಣಚೂರು ಮೋನು,ಹೊಸಪಳ್ಳಿ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಇಮಾಮ್ ಅನಸ್ ಅಝ್ ಅರಿ,ಹೊಸಪಳ್ಳಿ ಮಸೀದಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಅಬ್ದುಲ್ ಅಝೀಝ್ ಸಖಾಫಿ, ಕಡಪರ ಚಾರ ಜುಮಾ ಮಸೀದಿ ಖತೀಬ್ ಮುಝಮ್ಮಿಲ್,ಮದನಿ, ದರ್ಗಾ ಅಧ್ಯಕ್ಷ ಹನೀಫ್ ಹಾಜಿ , ಉಳ್ಳಾಲ,ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಜಬ್ಬಾರ್, ಕಬೀರ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News