ಬಸ್ ಗಳಿಗೆ ಕಲ್ಲು ತೂರಾಟ: ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ ಖಂಡನೆ
ಮಂಗಳೂರಿನಲ್ಲಿ ಬಂದ್ ಕರೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳು ನಿಲ್ದಾಣಗಳಲ್ಲೇ ಠಿಕಾಣಿ ಹೂಡಿವೆ.
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಕೊಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಶುಕ್ರವಾರ ಬೆಳಗ್ಗೆ ಹಲವೆಡೆ ಸಾರ್ವಜನಿಕ ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಹಿಂಸಾತ್ಮಕ ಕೃತ್ಯವನ್ನು ಖಂಡಿಸುವುದಾಗಿ ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ ಹೇಳಿದೆ.
ಬಸ್ ಗಳ ಮೇಲಿನ ಕಲ್ಲು ತೂರಾಟದಂತಹ ಘಟನೆಗಳು ಬಸ್ ನೌಕರರ ಜೀವ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ತೀವ್ರ ಪೆಟ್ಟು ನೀಡುತ್ತವೆ. ನಿರಪರಾಧಿ ಚಾಲಕರು, ನಿರ್ವಾಹಕರು ಹಾಗೂ ದೈನಂದಿನ ಪ್ರಯಾಣಿಕರು ಭೀತಿಗೆ ಒಳಗಾಗಿರುವುದು ವಿಷಾದನೀಯ. ಸಾರ್ವಜನಿಕ ಸಾರಿಗೆ ಯಾವ ರಾಜಕೀಯ, ಧಾರ್ಮಿಕ ಅಥವಾ ಪ್ರಾದೇಶಿಕ ವಿಚಾರಗಳಿಗೆ ಗುರಿ ಆಗಬಾರದು. ಇಂತಹ ದಾಳಿಗಳಿಗೆ ಕಡಿವಾಣ ಹಾಕಲು ಸರಕಾರ ಹಾಗೂ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ ಹೇಳಿಕೆಯಲ್ಲಿ ಒತ್ತಾಯಿಸಿದೆ.