ಮಂಗಳೂರು: ಮಲಬಾರ್ ಗೋಲ್ಡ್‌ನಲ್ಲಿ ತನ್ವಿಕ ನೂತನ ಆಭರಣ ಅನಾವರಣ
ಮಂಗಳೂರು: ನಗರದ ಪಳ್ನೀರ್‌ನಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಡಿವೈನ್ ಎಂಬ ವಿಶೇಷ ಬ್ರ್ಯಾಂಡ್‌ನಡಿ ಹೊರತರಲಾದ ತನ್ವಿಕ ನೂತನ ಆಭರಣ ಸಂಗ್ರಹವನ್ನು ಸೋಮವಾರ ಅನಾವರಣಗೊಳಿಸಲಾಯಿತು.
ಫ್ಯಾಶನ್ ಮೋಡಲ್, ಡಿಸೈನರ್, ಬ್ಲಾಗರ್ ಶಹನಾ ಶೆಟ್ಟಿ ಮತ್ತು ರೂಪದರ್ಶಿ ವೈಷ್ಣವಿ ಶೆಟ್ಟಿ ಅನಾವರಣ ಗೊಳಿಸಿ ಶುಭ ಹಾರೈಸಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೈವಿಧ್ಯದಿಂದ ಕೂಡಿದ ಈ ನೂತನ ಸಂಗ್ರಹವು ದೈವತ್ವವನ್ನು ಸಾರುವ ಆಭರಣವಾಗಿದೆ. ಇದರಲ್ಲಿ ಸಾಂಪ್ರದಾಯಿಕ ಹಾಗೂ ಅದೃಷ್ಟ ತರುವ ಲಕ್ಷ್ಮಿದೇವತೆಯನ್ನು ಅಳವಡಿಸಲಾಗಿದೆ. ಇದೊಂದು ಅದ್ಭುತ ವಾದ ಸಂಗ್ರಹವಾಗಿದೆ. ತನ್ವಿಕ ಆಭರಣಗಳು ಎಲ್ಲ ವಯೋಮಾನದವರಿಗೆ ತಕ್ಕಂತೆ ಹಬ್ಬಗಳು, ಮದುವೆ ಮತ್ತಿತರ ಸಮಾರಂಭಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೆಕ್ಲೇಸ್, ಓಲೆಗಳು, ಬಳೆಗಳು ಮತ್ತು ಉಂಗುರಗಳ ಸಾಕಷ್ಟು ಸಂಗ್ರಹಗಳು ಲಭ್ಯ ಇದೆ ಎಂದು ಪ್ರಕಟನೆ ತಿಳಿಸಿದೆ.
ಈ ಸಂದರ್ಭ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ಸ್ಟೋರ್ ಹೆಡ್ ಶರತ್‌ಚಂದ್ರನ್, ಮ್ಯಾನೇಜ್ಮೆಂಟ್ ಟ್ರೈನಿ ಅಹ್ಮದ್ ನಝರ್, ಶೋರೂಮ್ ಮ್ಯಾನೇಜರ್ ರಘುರಾಮ್ ಸಿ.ಎಸ್. ಉಪಸ್ಥಿತರಿದ್ದರು.