×
Ad

ಕುಪ್ಪೆಪದವು: ನವೀಕರಿಸಲಾದ ಬದ್ರಿಯಾ ಜುಮಾ‌ ಮಸೀದಿ ಉದ್ಘಾಟನೆ

Update: 2025-05-16 22:40 IST

ಕುಪ್ಪೆಪದವು: ಇಲ್ಲಿನ ನವೀಕರಿಸಲಾದ ಬದ್ರಿಯಾ ಜುಮಾ‌ ಮಸೀದಿಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಾಪುರ ಅವರು ಶುಕ್ರವಾರ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಲಾಹನು ನೀಡಿರುವ ಬಹುದೊಡ್ಡ ಉಡುಗೊರೆಯಾಗಿರುವ ನಮಾಝನ್ನು ಯಾವಾಗಲೂ‌ ಮಸೀದಿಯಲ್ಲಿ‌ ನಿರ್ವಹಿಸುವುದಾಗಿದೆ ಉತ್ತಮ. ಮಸೀದಿಯಲ್ಲಿ ಸಾಧ್ಯವಾಗದಿದ್ದರೆ ಮನೆ, ಕೆಲಸದ ಸ್ಥಳಗಳಲ್ಲೂ ನಿರ್ವಹಿಸಬಹುದಾಗಿದೆ. ಯಾವುದೇ ಕಾರಣಕ್ಕೂ ತಪ್ಪದೆ ನಮಾಝ್ ನಿರ್ವಹಿಸಬೇಕೆಂದು ನುಡಿದರು.

ಶುಕ್ರವಾರದ ಜುಮಾ ನಮಾಝ್ ಗೆ ನೇತೃತ್ವ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬದ್ರುಸ್ಸಾದಾತ್ ಇಬ್ರಾಹೀಂ ಖಲೀಲುಲ್ ಬುಖಾರಿ ತಂಙಲ್ ಅವರು, 72 ವರ್ಷಗಳ ಹಿಂದೆ ಮಹಾತ್ಮರಿಂದ ಆರಂಭಗೊಂಡ ಮಸೀದಿಯನ್ನು ಉತ್ತಮ‌ ಶೈಲಿಯಲ್ಲಿ ನವೀಕರಿಸಿರು ವುದು ಹರ್ಷದ ವಿಚಾರ ಎಂದು ಆಡಳಿತ ಸಮಿತಿಯನ್ನು ಶ್ಲಾಘಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬದ್ರಿಯಾ ಜುಮಾ‌ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಅಲಿ ಮಾತನಾಡಿ, ಮಸೀದಿಯ ಕೆಲಸದಲ್ಲಿ ಎಲ್ಲರೂ ಸೇರಿದ್ದ ಪರಿಣಾಮ ಉತ್ತಮ ಶೈಲಿಯ ಮಾದರಿ‌ ಮಸೀದಿ ನಿರ್ಮಾಣವಾಗಿದೆ. ಸರ್ವಧರ್ಮಿಯರನ್ನು ಮಸೀದಿಗೆ ಕರೆಸಿ ಮಸೀದಿಯ ಪರಿಚಯ ಮಾಡಿರುವುದು ಸೌಹಾರ್ದ ಕದಡುತ್ತಿರುವ ದುಷ್ಟ ಶಕ್ತಿಗಳಿಗೆ‌ ಉತ್ತರ ನೀಡಿದಂತಾಗಿದೆ ಎಂದರು.

ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್‌ ಮಾತನಾಡಿ ನಮಾಝ್ ನ ಪ್ರಾಮುಖ್ಯತೆಯನ್ನು ವಿವರಿಸಿದರು.

ಇದೇ ಸಂದರ್ಭ ಭವ್ಯ ಮಸೀದಿ ನಿರ್ಮಾಣದಲ್ಲಿ ಸಹಕರಿಸಿದ ಇಂಜಿನಿಯರ್ ಪ್ರನೀತ್ ರೈ, ಮರದ ಕೆತ್ತನೆಗಳನ್ನು ಮಾಡಿದ್ದ ಶಿಲ್ಪಿ ರಾಜ ಸಾಗರ್, ಮರದ ಆಚಾರಿ ರವಿ ಪೂಜಾರಿ ಹಾಗೂ ಜನಾರ್ಧನ, ಸಂಜಯ್, ರವಿ ಅವರನ್ನು ವೇದಿಕೆಯಲ್ಲಿ ಸ್ಮರಣಿಕೆ ಹಾಗೂ ಉಡುಗೊರೆ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ‌ ಮಸೀದಿಯ ಅಧ್ಯಕ್ಷ ಕೆ. ಮುಹಮ್ಮದ್ ಶರೀಫ್ ಕಜೆ ವಹಿಸಿದ್ದರು. ಖತೀಬ್ ಅಬ್ದುಲ್ ಸಲಾಂ ಮದನಿ ಉರುವಾಲು ಪದವು ಸ್ವಾಗತಿಸಿದರು.

ಜಿ.ಎ.‌ ಬಾವ, ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ಮುಸ್ತಫಾ ಗಂಜಿಮಠ, ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್, ಅಶ್ರಫ್ ಅಡ್ಯಾರ್, ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿಯ ಮಾಜಿ ಖತೀಬ್ ಕೆ.ಎಚ್.ಯು. ಶಾಫಿ ಮದನಿ ಅಲ್ ಅಝ್ಹರಿ ಕರಾಯ, ಉದ್ಯಮಿ ಮುಹಮ್ಮದ್ ಮುಸ್ತಫಾ, ಮುಲ್ಲರ ಪಟ್ನಾ ಮಸೀದಿಯ ಅಧ್ಯಕ್ಷ ಎಂ ಟಿ ಅಶ್ರಫ್, ನವೀಕೃತ ಮಸಿ ಇದಿಯಾ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಗುದೂರು, ಉಪಾಧ್ಯಕ್ಷ ಇಬ್ರಾಹೀಂ ನಡುಪಲ್ಲ, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಎನ್. ಅಬ್ದುಲ್ ಲತೀಫ್ , ಕೋಶಾಧಿಕಾರಿ ಹಾಜಿ ಇಬ್ರಾಹಿಂ, ಜೊತೆ ಕಾರ್ಯದರ್ಶಿ ಮಹಮ್ಮದ್ ಮುಸ್ತಫ ಕಾಡಕೇರಿ, ಮುಲ್ಲರ ಪಟ್ನ ಜಿ ಎಚ್ ಎಂ ಫೌಂಡೇಶನ್ ಅಧ್ಯಕ್ಷ ಎಂ ಬಿ ಶಾಫಿ ಮುಲ್ಲರಪಟ್ನ, ಫಯಾಝ್ ಅಲ್ ಮುಝೈನ್ ಜುಬೈಲ್, ಪಿ ಡಬ್ಲ್ಯೂಡಿ ಕಾಂಟ್ರಾಕ್ಟರ್ ಎಂ. ಎಸ್. ಶಾಲಿ ಮುತ್ತೂರು, ಬಿ ಜೆ ಎಂ ಸ್ವಲಾತ್‌ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಝಾಕ್ ಹಳೆ ನೀರು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸಿದ್ದೀಕ್, ಕೋಶಾಧಿಕಾರಿ ನಝೀರ್ ಅಹ್ಮದ್ , ಉದ್ಯಮಿಗಳಾದ ಇಸ್ಮಾಯಿಲ್, ಯೂಸುಫ್, ಹಾಜಿ ಯೂಸುಫ್ ಗಂಜಿಮಠ ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಖತೀಬ್ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಾರ್ಯಕ್ರಮ‌ ನಿರೂಪಿಸಿ ಧನ್ಯವಾದ‌‌ ಸಮರ್ಪಿಸಿರು.‌



























Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News