ಮಂಜನಾಡಿ| ಬಸ್ ನ ಬೇರಿಂಗ್ ಕಟ್: ತಪ್ಪಿದ ಅನಾಹುತ
ಕೊಣಾಜೆ: ನಾಟೆಕಲ್ ಮಂಜನಾಡಿ ಮಾರ್ಗವಾಗಿ ಮುಡಿಪು ಸಂಚರಿಸುತ್ತಿದ್ದ ಸರ್ಕಾರಿ ಬಸ್ಸೊಂದು ಮುಂಜನಾಡಿ ಗ್ರಾಮ ಉರುಮಣೆ- ಕಲ್ಕಟ್ಟ ನಡುವಿನ ಕಡಿದಾದ ತಿರುವಿನ ಪಟ್ಲ ತೋಟದ ಬಳಿಯಲ್ಲಿ ಬೇರಿಂಗ್ ತುಂಡಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸದೆ ಪವಾಡ ಸದೃಶ ವಾಗಿ ರಸ್ತೆ ಬದಿಯಲ್ಲೆ ನಿಂತಿರುವ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಸ್ಟೇಟ್ ಬ್ಯಾಂಕ್ ನಿಂದ ತೊಕ್ಕೊಟ್ಟು- ಮಂಜುನಾಡಿ ಮಾರ್ಗವಾಗಿ ಮುಡಿಪು ಸಂಚರಿಸುವ ಉರುಮಣೆ ಮೊದಲ ತಿರುವು ದಾಟಿ ಪಟ್ಲ ತಾರಿತೋಟ ಬಳಿ ತಿರುವು ಪಡೆದುಕೊಳ್ಳುವುದಕ್ಕೂ ಮುನ್ನ ಬೇರಿಂಗ್ ಕಟ್ಟಾಗಿ ರಸ್ತೆಯನ್ನು ಬಿಟ್ಟು 6 ಅಡಿ ಅಗಲಕ್ಕೆ ಕೆಳಗೆ ಕಮರಿಗೆ ಉರುಳಿ ಬೀಳುತ್ತಿದ್ದರೂ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದೊಡ್ಡ ಅಪಾಯ ತಪ್ಪಿದೆ. ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು, ದಕ್ಷಿಣ ಸಂಚಾರಿ ಪೊಲೀಸರು ಆಗಮಿಸಿದ್ದು ಬಸ್ಸನ್ನು ದುರಸ್ಥಿಗೊಳಿಸುವ ಹಾಗೂ ಮೇಲೆತ್ತುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಬಸ್ ನಲ್ಲಿ ತುಂಬಿದ್ದ ಜನ
ಸ್ಥಳೀಯ ಕಲ್ಕಟ್ಟ ಬಳಿಯ ಮಂಜನಾಡಿ ಜಾತ್ರೆ ಕಡೆಯ ದಿನ ಆಗಿದ್ದು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಬಸ್ಸಿನಲ್ಲಿ ಅಂದಾಜು ಸುಮಾರು 60ಕ್ಕೂ ಹೆಚ್ಚು ಜನರಷ್ಟು ಪ್ರಯಾಣಿಕರಿದ್ದರೆನ್ನಲಾಗಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.