'ಯುರೋಪಿಯನ್ ಒಕ್ಕೂಟ - ಭಾರತ ಪಾಲುದಾರಿಕೆ': ವಿಶೇಷ ಉಪನ್ಯಾಸ
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಹಾರ ಆಡಳಿತ ವಿಭಾಗದ ವತಿಯಿಂದ "ಯುರೋಪಿಯನ್ ಒಕ್ಕೂಟ - ಭಾರತ ಪಾಲುದಾರಿಕೆ: ಐತಿಹಾಸಿಕ ಮೌಲ್ಯಮಾಪನ ಮತ್ತು ಭವಿಷ್ಯದ ನಿರೀಕ್ಷೆಗಳು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ನಡೆಯಿತು.
ವಿಶೇಷ ಉಪನ್ಯಾಸವನ್ನು ನೀಡಿದ ಯುರೋಪಿಯನ್ ಪಾರ್ಲಿಮೆಂಟ್‌ನ ಮಾಜಿ ಸದಸ್ಯ ಜೋರ್ಡಿ ಸೋಲ್ ಫೆರಾಂಡೊ ಅವರು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಆರ್ಥಿಕ ಮತ್ತು ಭೌಗೋಳಿಕ ವ್ಯತ್ಯಾಸಗಳು ಮತ್ತು ಹೋಲಿಕೆಗಳ ವಿಶ್ಲೇಷಣೆ ಮಾಡಿದರು. ಯುರೋಪಿಯನ್ ಒಕ್ಕೂಟ ಹಾಗೂ ಭಾರತದ ನಡುವಿನ ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ವ್ಯವಸ್ಥೆ ಮತ್ತು ಭದ್ರತಾ ಸಹಕಾರ ಹಾಗೂ ಪಾಲುದಾರಿಕೆಯ ಸವಾಲುಗಳು ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು.
ಮಂಗಳೂರು ವಿವಿ ವ್ಯವಹಾರ ಆಡಳಿತ ವಿಭಾಗದ ಅಧ್ಯಕ್ಷ ಡಾ.ಶೇಖರ್ ನಾಯಕ್ ಅವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಅವರು ವಂದಿಸಿದರು.