×
Ad

ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು, ಐವತ್ತೊಕ್ಲು: ನೂತನ ಪದಾಧಿಕಾರಿಗಳ ಆಯ್ಕೆ

Update: 2025-06-12 18:19 IST

ಇಸ್ಮಾಯೀಲ್ ಪಡ್ಪಿನಂಗಡಿ, ಅಬ್ದುಲ್ಲ ಮರಕ್ಕಡ, ಸುಲೈಮಾನ್ ಸಖಾಫಿ

ಸುಳ್ಯ: ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು, ಐವತ್ತೊಕ್ಲು ಇದರ ಮಹಾಸಭೆ ಇತ್ತೀಚೆಗೆ ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ ಅದ್ಯಕ್ಷತೆಯಲ್ಲಿ ನಡೆಯಿತು.

ಖತೀಬ್ ಅಬ್ದುಲ್ಲ ಮದನಿ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುರ‌್ರಝಾಕ್ ವರದಿ, ಲೆಕ್ಕ ಪತ್ರ ಮಂಡಿಸಿದರು. ಮಸೀದಿಯ ಅಬಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಬಳಿಕ2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತ್ತು.

ಗೌರವಾದ್ಯಕ್ಷರಾಗಿ ಹಾಜಿ ಕುಂಞಿಪಳ್ಳಿ ಐವತ್ತೊಕ್ಲು, ಅಧ್ಯಕ್ಷರಾಗಿ ಇಸ್ಮಾಯೀಲ್ ಪಡ್ಪಿನಂಗಡಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲ ಮರಕ್ಕಡ, ಕೋಶಾಧಿಕಾರಿಯಾಗಿ ಸುಲೈಮಾನ್ ಸಖಾಫಿ, ಉಪಾಧ್ಯಕ್ಷರಾಗಿ ಜಮಾಲ್ ಪಡ್ಪಿನಂಗಡಿ, ಜೊತೆ ಕಾರ್ಯದರ್ಶಿಗಳಾಗಿ ರಹೀಂ ಮರಕ್ಕಡ ಮತ್ತು ನಝೀರ್ ಪಿಲತ್ತಡಿ, ನಿರ್ದೇಶಕರುಗಳಾಗಿ ಖಾದರ್ ಕೆ.ಬಿ., ರಹೀಂ ಐವತ್ತೊಕ್ಲು, ರಫೀಕ್ ಸಿ.ಎಂ., ಆದಂ ಪಡ್ಪು, ಹನೀಫ್ ಅಡಿಬಾಯಿ, ರಫೀಕ್ ಪಂಜ, ಉಮರ್ ಚೆಕ್ಕಡ್ಕ, ಹಮೀದ್ ಚೆಕ್ಕಡ್ಕ, ಶರೀಫ್ ಕಿಂಗ್ ಸ್ಟಾರ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News