ಮುಚ್ಚಿಲ ಕ್ಲಾಸಿಕ್ ಸ್ಪೋರ್ಟ್ಸ್ ಮತ್ತು ಆಟ್ಸ್ ಕ್ಲಬ್‌ನಿಂದ ಪಡ್ಪಿನಂಗಡಿ ಶಾಲೆಗೆ ಧನ ಸಹಾಯ
Update: 2025-06-12 22:18 IST
ಸುಳ್ಯ, ಜೂ.12: ಪಡ್ಪಿನಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆರಂಭವಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗೆ ಕ್ಲಾಸಿಕ್ ಸ್ಪೋರ್ಟ್ಸ್ ಮತ್ತು ಆಟ್ಸ್ ಕ್ಲಬ್ ಮುಚ್ಚಿಲ ವತಿಯಿಂದ ರೂ. 5,000 ಅನ್ನು ನೀಡಲಾಯಿತು.
ಈ ಸಂದರ್ಭ ಸುಳ್ಯ ತಾಪಂ ಮಾಜಿ ಸದಸ್ಯ ಗಫೂರ್ ಕಲ್ಮಡ್ಕ, ಎಸ್‌ಡಿಎಂಸಿ ಅಧ್ಯಕ್ಷ ರಫೀಕ್ ಟಿ.ಎಸ್., ಶಾಲೆಯ ಮುಖ್ಯ ಶಿಕ್ಷಕಿ ಧರ್ಮವತಿ, ಎಲ್‌ಕೆಜಿ, ಯುಕೆಜಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ಲೋಕೇಶ್ ಅಕ್ರಿಕಟ್ಟೆ, ಕ್ಲಾಸಿಕ್ ಸ್ಪೋರ್ಟ್ಸ್ ಮತ್ತು ಆಟ್ಸ್‌ನ ಸದಸ್ಯರಾದ ಸಿದ್ದೀಕ್ ಮುಚ್ಚಿಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.