ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಕೆವಿಎಎಫ್‌ಎಸ್‌ಯು ಆಡಳಿತ ಮಂಡಳಿಗೆ ನಾಮನಿರ್ದೇಶನ
ಮಂಗಳೂರು,ಜೂ.14; ಮಂಗಳೂರಿನ ರೈಸನ್ ನ್ಯೂಟ್ರಿಷನ್ ಸಂಸ್ಥೆಯ ನಿರ್ದೇಶಕ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರನ್ನು ಕರ್ನಾಟಕ ಸರ್ಕಾರವು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ (ಕೆವಿಎಎಫ್‌ಎಸ್‌ಯು) ಆಡಳಿತ ಮಂಡಳಿಗೆ ನಾಮನಿರ್ದೇಶನ ಮಾಡಿದೆ. ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳವರೆಗೆ ಇರುತ್ತದೆ.
ಡಾ. ಸುಶಾಂತ್ ರೈ ಅವರು ಪಶುವೈದ್ಯಕೀಯ ಮತ್ತು ಕಕ್ಕುಟೋದ್ಯಮದಲ್ಲಿ ಗುರುತಿಸಲ್ಪಟ್ಟ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವರು ಈ ಹಿಂದೆ 2019 ರಿಂದ 2024 ರವರೆಗೆ ಕರ್ನಾಟಕ ಕೋಳಿ ಸಾಕಣೆದಾರರ ಮತ್ತು ತಳಿಗಾರರ ಸಂಘದ (ಕೆಪಿಎಫ್‌ಬಿಎ) ಅಧ್ಯಕ್ಷರಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಅವರು ಹೈದರಾಬಾದ್‌ನ ಐಸಿಎಆರ್-ಎನ್‌ಐಎಎನ್‌ಪಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಆ್ಯಂಡ್ ಫಿಸಿಯಾಲಜಿ) ಮತ್ತು ಐಸಿಎಆರ್-ಡಿಪಿಆರ್ (ಡೈರೆಕ್ಟರೇಟ್ ಆಫ್ ಪೌಲ್ಟ್ರಿ ರಿಸರ್ಚ್) ನ ಸಂಶೋಧನಾ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. 2024 ರಲ್ಲಿ, ಅವರು ಕರ್ನಾಟಕದಿಂದ ಭಾರತೀಯ ಪಶುವೈದ್ಯಕೀಯ ಮಂಡಳಿಯ (ವಿಸಿಐ) ಆಡಳಿತ ಮಂಡಳಿಗೆ ಆಯ್ಕೆಯಾಗುವ ಮೂಲಕ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲ ಪಡಿಸಿದ್ದರು.