×
Ad

ಮಂಗಳೂರು: ಸಣ್ಣ ನೀರಾವರಿ ಇಲಾಖೆ ಕಚೇರಿ ಸ್ಥಳಾಂತರ

Update: 2025-06-16 18:41 IST

ಮಂಗಳೂರು: ನಗರದ ಪಿಡಬ್ಲ್ಯೂಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಕಚೇರಿಯನ್ನು ನಗರದ ಬೋಂದೆಲ್‌ನಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸ್ವಂತ ಕಚೇರಿ ಕಟ್ಟಡಕ್ಕೆ ಜೂ.16ರಂದು ಸ್ಥಳಾಂತರಗೊಳಿಸಲಾಗಿದೆ.

ಆದ್ದರಿಂದ ಈ ಕಚೇರಿಗೆ ಸಂಬಂಧಿಸಿದಂತೆ ಯಾವುದೇ ಸರಕಾರಿ/ಅರೆ ಸರಕಾರಿ ಪತ್ರ ವ್ಯವಹಾರವನ್ನು ನೂತನ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬೋಂದೆಲ್, ಮಂಗಳೂರು- 575008 ಈ ವಿಳಾಸಕ್ಕೆ ಕಳುಹಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News