ನೇಣು ಬಿಗಿದು ಮಹಿಳೆ ಆತ್ಮಹತ್ಯೆ
Update: 2025-06-17 21:26 IST
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರು ಗ್ರಾಮದ ಕರುವೇಲು ಎಂಬಲ್ಲಿನ ನಿವಾಸಿ ಉಮ್ಮರ್ ಪಿ ಎಂಬವರ ಪತ್ನಿ ಮೈಮುನ(50) ಎಂಬವರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಂಗಳವಾರ ಸಂಭವಿಸಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಇವರು, ಗಂಡ ಪ್ರಾರ್ಥನೆಗೆಂದು ಮಸೀದಿಗೆ ಹೋಗಿದ್ದ ಸಮಯದಲ್ಲಿ ನೆಣು ಬಿಗಿದು ಆತ್ಮಹತ್ಯೆಗೈದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.