×
Ad

ಜೆಪ್ಪಿನಮೊಗರುವಿನಲ್ಲಿ ಅಪಘಾತ: ದ.ಕ.ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಸಹಿತ ಇಬ್ಬರು ಮೃತ್ಯು

Update: 2025-06-18 21:08 IST

ಮಂಗಳೂರು, ಜೂ.18: ರಾ.ಹೆ.66ರ ಜಪ್ಪಿನಮೊಗರು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ದ.ಕ.ಜಿಲ್ಳಾ ಎನ್‌ಎಸ್‌ಯುಐ ಉಪಾಧ್ಯಕ್ಷ ಸಹಿತ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಮೃತಪಟ್ಟವರನ್ನು ಕಾರನ್ನು ಚಲಾಯಿಸುತ್ತಿದ್ದ ನಗರದ ಕದ್ರಿ ನಿವಾಸಿ ಅಮನ್ ರಾವ್ (22) ಮತ್ತು ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಕೊಂಚಾಡಿ ಲ್ಯಾಂಡ್‌ಲಿಂಕ್ಸ್ ನಿವಾಸಿ, ದ.ಕ.ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಓಂಶ್ರೀ ಪೂಜಾರಿ(24) ಎಂದು ಗುರುತಿಸಲಾಗಿದೆ. ಈ ಕಾರಿನಲ್ಲಿದ್ದ ವಂಶಿ ಮತ್ತು ಆಶಿಕ್ ಗಂಭೀರ ಗಾಯಗೊಂಡು ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೋರ್ವ ಪ್ರಯಾಣಿಕ ಇಟಲಿಯ ಪ್ರಜೆ ಜೆರ್ರಿ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

*ಘಟನೆ ವಿವರ: ಅಮನ್ ರಾವ್ ತನ್ನ ತಂದೆ ದೀಪಕ್ ರಾವ್‌ಗೆ ಸೇರಿದ ಫೋಕ್ಸ್ ವೇಗನ್ ವರ್ಟಸ್ ಹೊಸ ಕಾರನ್ನು ಮಂಗಳವಾರ ರಾತ್ರಿ ಸುಮಾರು 12ರ ಬಳಿಕ ಸ್ನೇಹಿತರ ಜೊತೆಗೂಡಿ ಹೊರಗಡೆ ಹೋಗಿದ್ದರು ಎನ್ನಲಾಗಿದೆ. ಕರ್ನಾಟಕ-ಕೇರಳ ಗಡಿಯ ತಲಪಾಡಿಯವರೆಗೆ ತೆರಳಿದ್ದು, ಬಳಿಕ ಮಂಗಳೂರಿಗೆ ಮರಳುವಾಗ ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಬಳಿ ಅಪಘಾತ ಸಂಭವಿಸಿತು ಎನ್ನಲಾಗಿದೆ.

ದೀಪಕ್‌ರಾವ್‌ಗೆ ನಗರದ ಪಾಂಡೇಶ್ವರದಲ್ಲಿ ಸ್ಟುಡಿಯೋ ಇದೆ. ಅಮನ್ ರಾವ್‌ಗೆ ಬಾಲ್ಯದಿಂದಲೇ ಬೈಕ್, ಕಾರುಗಳ ಬಗ್ಗೆ ಕ್ರೇಜ್ ಇತ್ತು ಎನ್ನಲಾಗಿದೆ. ಈ ಕಾರಿನಲ್ಲಿ ಐವರು ಯುವಕರಿದ್ದು, ರಾತ್ರಿ ಸುಮಾರು 2:30ರ ವೇಳೆಗೆ ಜಪ್ಪಿನಮೊಗರು ಕಿರು ಸೇತುವೆಯ ತಡೆಗೋಡೆಗೆ ಚಾಲಕನ ನಿಯತ್ರಣ ತಪ್ಪಿದ ಕಾರು ತಡೆಗೋಡೆಗೆ ಢಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣ ಹಾನಿಯಾಗಿದೆ. ಕಾರಿನ ಇಂಜಿನ್ ಭಾಗವೂ ಹೊರಕ್ಕೆ ಬಂದಿದೆ. ಏರ್ ಬ್ಯಾಗ್ ಕೂಡ ಹರಿದು ಹೋಗಿದೆ ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಅಮೀನ್ ಪೂಜಾರಿಯ ಪುತ್ರನಾಗಿರುವ ಓಂಶ್ರೀ ಪೂಜಾರಿ ದ.ಕ. ಜಿಲ್ಲಾ ಎನ್‌ಎಸ್‌ಐಯು ಘಟಕದ ಉಪಾಧ್ಯಕ್ಷರಾಗಿದ್ದುಕೊಂಡು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯ ರಾಗಿದ್ದರು. ಅಮನ್ ರಾವ್ ಪ್ಲೆಕ್ಸ್, ಪೋಸ್ಟರ್ ತಯಾರಿಸುವ ವ್ಯವಹಾರ ನಡೆಸುತ್ತಿದ್ದರು.

ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಬಿ.ಕೆ.ಹರಿಪ್ರಸಾದ್, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಅಶೋಕ್ ಕುಮಾರ್ ರೈ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್.ಎಂ.ಅಡ್ಯಂತಾಯ, ಮುಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್.ಮುಹಮ್ಮದ್, ಜಿ.ಎ.ಬಾವ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಟಿ.ಎಂ.ಶಹೀದ್, ಲಾವಣ್ಯ ಬಳ್ಳಾಲ್, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಬಿ.ಎಚ್. ಖಾದರ್, ಶಶಿಧರ್ ಹೆಗ್ಡೆ, ಯು.ಕೆ.ಮೋನು, ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಮಮತಾ ಗಟ್ಟಿ, ಬ್ಲಾಕ್ ಅಧ್ಯಕ್ಷರಾದ ಪುರುರೋಷತ್ತಮ ಚಿತ್ರಾಪುರ, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ರಮೇಶ್ ಶೆಟ್ಟಿ ಬೋಳಿಯಾರ್, ಪ್ರಶಾಂತ್ ಕಾಜೆವ, ಸುರೇಂದ್ರ ಕಂಬಳಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಕೃಷ್ಣ ಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಪಿ.ಮೋಹನ್ ಕೋಟ್ಯಾನ್, ಪಿ.ಸಿ.ಜಯರಾಂ, ಪ್ರವೀಣ್ ಕುಮಾರ್ ಜೈನ್, ಪಿ.ಕೆ.ಅಭಿಲಾಷ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಸುಹಾನ್ ಆಳ್ವ, ಶಾಲೆಟ್ ಪಿಂಟೋ, ಜೋಕಿಂ ಡಿಸೋಜ, ಕೆ.ಕೆ. ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ದಿನೇಶ್ ಮೂಳೂರು, ನಾರಾಯಣ ನಾಯ್ಕ್, ಮನೋರಾಜ್ ರಾಜೀವ, ಲಾರೆನ್ಸ್ ಡಿಸೋಜ, ಡಾ.ಶೇಖರ್ ಪೂಜಾರಿ, ಸುಭಾಷ್ಚಂದ್ರ ಶೆಟ್ಟಿ ಕೊಲ್ನಾಡ್, ಚೇತನ್ ಬೆಂಗ್ರೆ, ಬಿ.ಎಂ.ಅಬ್ಬಾಸ್ ಅಲಿ, ಶೈಲಜಾ, ಸುದರ್ಶನ್ ಜೈನ್, ಅಲಿಸ್ಟರ್ ಡಿಕುನ್ಹ, ಮನಪಾ ಮಾಜಿ ಸದಸ್ಯರಾದ ಭಾಸ್ಕರ್ ಕೆ, ಅಬ್ದುಲ್ ರವೂಫ್, ಅನಿಲ್ ಕುಮಾರ್, ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸ್ ಲಾಟ್ ಪಿಂಟೊ, ಕೇಶವ ಮರೋಳಿ, ನವೀನ್ ಡಿಸೋಜ, ಎ.ಸಿ.ವಿನಯರಾಜ್, ಜೆಸಿಂತಾ, ಸಂಶುದ್ದೀನ್ ಕುದ್ರೋಳಿ, ಲತೀಫ್ ಕಂದಕ್, ಅಶ್ರಫ್ ಬಜಾಲ್, ಝೀನತ್ ಸಂಶುದ್ದೀನ್ ಬಂದರ್, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಚೇತನ್ ಕುಮಾರ್, ತನ್ವೀರ್ ಶಾ, ಕಿಶೋರ್ ಶೆಟ್ಟಿ, ನೀರಜ್‌ಚಂದ್ರಪಾಲ್, ನಝೀರ್ ಬಜಾಲ್, ನೀರಜ್ ಚಂದ್ರಪಾಲ್, ವಿಕಾಸ್ ಶೆಟ್ಟಿ ಏರ್‌ಪೋರ್ಟ್ ಖಾದರ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News