×
Ad

ವಿದ್ಯಾರ್ಥಿಗಳಿಗೆ ಪರಂಪರಾಗತ ಮೌಲ್ಯಬೋಧನೆ ಅಗತ್ಯ: ಮುಕ್ಕಂ ಫೈಝಿ

Update: 2025-06-19 22:16 IST

ವಿಟ್ಲ, ಜೂ.19: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಾಠಗಳ ಜೊತೆಗೆ ನಮ್ಮ ಸಂಸ್ಕೃತಿಯ ಪರಂಪರಾಗತ ಸಾತ್ವಿಕ ಮೌಲ್ಯಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡುವುದು ಅಗತ್ಯವಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ಮುನ್ನುಗ್ಗುತ್ತಿರುವ ಯುವ ಪೀಳಿಗೆಗೆ ನಮ್ಮ ಪೂರ್ವಿಕ ಉಲಮಾಗಳ ಕೊಡುಗೆಗಳು ಹಾಗೂ ಅವರ ಆಧ್ಯಾತ್ಮಿಕ ಆದರ್ಶಗಳ ಮಹತ್ವವನ್ನು ತಿಳಿಸುವ ಮೂಲಕ ನೈತಿಕತೆಯಿಂದ ಕೂಡಿದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ‘ಸಮಸ್ತ’ ಉಲಮಾ ಸಂಘಟನೆಯ ಕಾರ್ಯದರ್ಶಿ ಮುಕ್ಕಂ ಉಮರ್ ಫೈಝಿ ಮಲಪ್ಪುರಂ ಹೇಳಿದ್ದಾರೆ.

ವಿಟ್ಲದ ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಅಧೀನದ ‘ಸಿಎಸ್‌ಡಬ್ಯುಸಿ’ ಕರ್ನಾಟಕದ ‘ಫಾಳಿಲಾ-ಫಳೀಲಾ’ ಮಹಿಳಾ ಕಾಲೇಜುಗಳ ಆಡಳಿತ ಸಮಿತಿಯ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮನ್ವಯ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ‘ಸಮಸ್ತ’ ಸಂಘಟನೆಯು ಪಿಯುಸಿ ಮತ್ತು ಡಿಗ್ರಿಯ ಜೊತೆಗೆ ‘ಫಾಳಿಲಾ-ಫಳೀಲಾ’ ಎಂಬ ಏಕೀಕೃತ ಪಠ್ಯಕ್ರಮದ ಮೂಲಕ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಒಟ್ಟಾಗಿ ನೀಡುತ್ತಿದ್ದು, ಈ ಕ್ರಮವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.

‘ಫಾಳಿಲಾ-ಫಳೀಲಾ’ ಕರ್ನಾಟಕ ರೆನಲ್ ಸಮಿತಿ’ಯ ಅಧ್ಯಕ್ಷ ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಬ್ದುರ‌್ರಶೀದ್ ಮಾಸ್ಟರ್ ಕಂಬಳಕ್ಕಾಡ್ , ನಿಝಾಂ ವಾಫಿ , ಸಿಎಸ್‌ಡಬ್ಯುಸಿ ಕೋಆರ್ಡಿನೇಟರ್ ಸಅದ್ ಫೈಝಿ ಮಲಪ್ಪುರಂ ತರಗತಿಗಳನ್ನು ನಡೆಸಿಕೊಟ್ಟರು.

ಕರ್ನಾಟಕದ ‘ಫಾಳಿಲಾ-ಫಳೀಲಾ’ ಕಾಲೇಜುಗಳ ಆಡಳಿತ ಸಮಿತಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

‘ಫಾಳಿಲಾ-ಫಳೀಲಾ’ ಕರ್ನಾಟಕ ರೆನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆಎಂಎ. ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿದರು. ಐ.ಟಿ. ಕೋಆರ್ಡಿನೇಟರ್ ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ ವಂದಿಸಿದರು. ದಾವೂದ್ ಹನೀಫಿ ಮಿತ್ತಬೈಲು ಮತ್ತು ಹಾರಿಸ್ ಕೌಸರಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News