ಹೊಸಂಗಡಿಯಲ್ಲಿ ಉಚಿತ ಅರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ
ಮಂಗಳೂರು: ಹೊಸಂಗಡಿ ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಿಜಾರ್ , ರಾಜ್ಯ ಪ್ರಶಸ್ತಿ ಪಡೆದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ರವಿವಾರ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಯಿತು
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಫ್ರೆಂಡ್ಸ್ ಕ್ಲಬ್ ಸದಾ ಗ್ರಾಮಸ್ಥರ ಆರೋಗ್ಯದ ಬಗ್ಗೆ ಒತ್ತುಕೊಟ್ಟು ಆಳ್ವಾಸ್ ಆಸ್ಪತ್ರೆ ವತಿಯಿಂದ ವಾರಕ್ಕೊಮ್ಮೆ ಅರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ಶಿಬಿರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಆಳ್ವಾಸ್ ಹೋಮಿಯೋಪಥಿಕ್ ಆಸ್ಪತ್ರೆ ವೈದ್ಯ ಡಾ.ಭರತ್ , ಡಾ ಪ್ರಶಾಂತ್ ,ಡಾ ಶಿವಕುಮಾರ್, ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್ ಸೀತಾರಾಮ ರೈ, ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯೀಲ್ ಕೆ ಪೆರಿಂಜೆ ,ಕ್ಲಬ್ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಗ್ರಾ ಪಂ ಸದಸ್ಯ ಆನಂದ ಬಂಗೇರ ಕೊಡಂಗೇರಿ ಉಪಸ್ಥಿತರಿದ್ದರು.
ಚಂದ್ರ ಪೇರಿ ,ಭರತ್ ,ನಾಗೇಶ್ ಕೋಟಿಯಾನ್ ಹೊಸಂಗಡಿ ,ಸಚ್ಚಿದಾನಂದ ಪೆರಿಂಜೆ, ದೇವದಾಸ್, ರಾಜೇಶ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿದರು.ಸುಜಿತ್ ವಂದಿಸಿದರು.