ಉಪ್ಪಿನಂಗಡಿ: ಮೈ ತುಂಬಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರಾ ನದಿ
Update: 2025-06-26 22:08 IST
ಉಪ್ಪಿನಂಗಡಿ: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಮೈ ತುಂಬಿ ಹರಿಯುತ್ತಿದ್ದು, ಉಪ್ಪಿನಂಗಡಿಯಲ್ಲಿ ಸಮುದ್ರಮಟ್ಟಕ್ಕಿಂತ 28.05 ಮೀಟರ್ ಎತ್ತರದಲ್ಲಿ ಹರಿಯುತ್ತಿವೆ.
ಉಭಯ ನದಿಗಳು ಸಂಗಮಿಸಿ ಹರಿಯುವ ಮನಮೋಹಕ ದೃಶ್ಯವನ್ನು ಉಪ್ಪಿನಂಗಡಿಯ ಹವ್ಯಾಸಿ ಛಾಯಗ್ರಾಹಕ ಅಚಲ್ ಉಬರಡ್ಕ ತನ್ನ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಾಗ ಕಂಡು ಬಂದ ದೃಶ್ಯ.