×
Ad

ಉಚಿತ ಹೊಲಿಗೆ ತರಬೇತಿ ಕೇಂದ್ರಗಳಿಗಾಗಿ ಅರ್ಜಿ ಆಹ್ವಾನ

Update: 2025-06-28 17:58 IST

ಮಂಗಳೂರು, ಜೂ.28: ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ ದಶಮಾನೋ ತ್ಸವದ ಪ್ರಯುಕ್ತ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಕೇಂದ್ರಗಳನ್ನು ಆರಂಭಿಸಲು ಆಸಕ್ತ ಗ್ರಾಪಂನಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೊದಲು ಆಗಮಿಸಿದ ಅರ್ಜಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿ ಗಾಗಿ ಆರಂಭಿಸಲಿರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ಹತ್ತು ಹೊಲಿಗೆ ಯಂತ್ರ ಮತ್ತು ತರಬೇತಿದಾರರ, ಸಹಾಯಕರ ವೇತನವನ್ನು, ತರಗತಿಗೆ ಸಂಬಂಧಪಟ್ಟ ಖರ್ಚು ವೆಚ್ಚಗಳನ್ನು ಸಂಸ್ಥೆಯ ವತಿಯಿಂದ ಭರಿಸಲಾಗುವುದು. ಮೂರು ತಿಂಗಳ ಅವಧಿಯ ಈ ಕೋರ್ಸ್‌ನಲ್ಲಿ ಪ್ರತಿದಿನ ಮೂರು ಬ್ಯಾಚ್ ಇರುತ್ತದೆ.

ಹೊಲಿಗೆ ತರಬೇತಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಅಂಕ ಪಡೆದ ಪ್ರತೀ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ತರಬೇತಿ ಪಡೆದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಕಾಣಿಕೆ ನೀಡಿ ಗೌರವಿಸಲಾಗುವುದು. ತರಗತಿಗೆ ಅನುಕೂಲವಾಗುವಂತೆ ಕಟ್ಟಡ ಸೌಕರ್ಯವಿರುವ ಗ್ರಾಪಂಗಳು ಜುಲೈ 5ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರಸ್ತುತ ಮಂಗಳೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಾಗೂ ಉಳ್ಳಾಲ ತಾಲೂಕಿನ ಮುಡಿಪು, ಕುರ್ನಾಡು, ಅಸ್ಸೈ, ಕೈರಂಗಳ, ಪಜೀರು, ಮುನ್ನೂರು, ಸಜಿಪ, ಬಾಳೆಪುಣಿ, ಬೆಳ್ಮ, ಕೊಣಾಜೆ ಆಸುಪಾಸಿನ ಗ್ರಾಪಂಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಧ್ಯಕ್ಷ ಎನ್. ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News