ಮುಲ್ಕಿ: ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮುಸ್ತಫಾ
ಮಂಗಳೂರು: ಮುಲ್ಕಿಯಲ್ಲಿ 2020ರ ಜೂ.5ರಂದು ಅಬ್ದುಲ್ಲತೀಫ್ ಎಂಬವರ ಕೊಲೆ ಆರೋಪಿ ತಲೆಮರೆಸಿಕೊಂಡಿದ್ದ ಪಕ್ಷಿಕೆರೆಯ ಕೆಮ್ರಾಲ್‌ನ ಮುಸ್ತಫಾ ಯಾನೆ ಮುಸ್ತಾ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅಬ್ದುಲ್ ಲತೀಫ್‌ರನ್ನು ದಾವೂದ್ ಹಕೀಂ, ಮುಸ್ತಫಾ ಸಹಿತ 10 ಮಂದಿ ಕೊಲೆಗೈದಿದ್ದರು. ಈ ಪೈಕಿ ಮುಸ್ತಫಾ 2020ರ ಅಕ್ಟೋಬರ್ 19ರಂದು ಜಾಮೀನು ಪಡೆದು ಹೊರಬಂದಿದ್ದ. ಈ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯವು 2022ರ ಎಪ್ರಿಲ್ 22ರಂದು ರದ್ದುಪಡಿಸಿತ್ತು. ಅಂದಿನಿಂದ ಮುಸ್ತಫಾ ತಲೆಮರೆಸಿಕೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ. ಈತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ಈತನು ನಕಲಿ ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ಪರಾರಿಯಾಗಿ ಬಳಿಕ ನೇಪಾಳ ಮೂಲಕ ಭಾರತಕ್ಕೆ ಮರಳಿ ಬಂದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಜೂ.30ರಂದು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ. ನಕಲಿ ಪಾಸ್‌ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸನಗುಡಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ. ಈತನ ಇರುದ್ಧ ಮುಲ್ಕಿ ಠಾಣೆಯಲ್ಲಿ 4 ಮತ್ತು ಇತರ ಜಿಲ್ಲೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟ್ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.