×
Ad

ಎಂಡೋ ಸಂತ್ರಸ್ತರಿಗೆ ಎಂಆ‌ರ್‌ಪಿಎಲ್ ವತಿಯಿಂದ ಸ್ವಚ್ಛತಾ, ಆರೋಗ್ಯ ಕಿಟ್ ವಿತರಣೆ

Update: 2025-07-03 22:57 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆಯ 210 ಎಂಡೋಸಲ್ಫಾನ್ ಸಂತ್ರಸ್ತರಿಗೆ ಎಂ ಆರ್ ಪಿಎಲ್ ವತಿಯಿಂದ ಆರೋಗ್ಯ ಮತ್ತು ಸ್ವಚ್ಛತಾ ಕಿಟ್‌ಗಳನ್ನು ಇತ್ತೀಚೆಗೆ ಸಂಸ್ಥೆಯ ಸಿಎಸ್‌ಆರ್‌ನಿಧಿಯ ಯೋಜನೆಯಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಂ ಆರ್ ಪಿ ಎಲ್ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ, ಜಿಲ್ಲಾ ನೋಡಲ್ ಅಧಿಕಾರಿ ಡಾ.ಜೆಸಿಂತಾ ಡಿಸೋಜ, ಎಂಡೋಸಲ್ಫಾನ್ ಜಿಲ್ಲಾ ಸಂಯೋಜಕ ಸಾಜುದ್ದೀನ್, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಆರೋಗ್ಯ ನಿರೀಕ್ಷಕ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News