×
Ad

ಮಳೆಯಿಂದ ತಡೆಗೋಡೆ, ರಸ್ತೆ ಕುಸಿತಗೊಂಡ ಸ್ಥಳಕ್ಕೆ ಐವನ್ ಭೇಟಿ

Update: 2025-07-07 21:27 IST

ಮಂಗಳೂರು: ಶಕ್ತಿನಗರದ ಕ್ಯಾಸ್ತಲಿನೊ ಕಾಲನಿಯಲ್ಲಿ ನಗರಪಾಲಿಕೆಯಿಂದ ನಿರ್ಮಿಸಲಾದ ತಡೆಗೋಡೆ ಮತ್ತು ರಸ್ತೆ ಮಳೆಯಿಂದಾಗಿ ಕುಸಿತಗೊಂಡು ಅಪಾರ ಹಾನಿಯಾಗಿದ್ದು, ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಭೇಟಿ ನೀಡಿದರು.

ತಡೆಗೋಡೆ ಮತ್ತು ರಸ್ತೆ ಮಳೆಯಿಂದಾಗಿ ಕುಸಿತಗೊಂಡ ಪರಿಣಾಮವಾಗಿ ಅಲ್ಲಿ ಮೂರು- ನಾಲ್ಕು ಮನೆ ಗಳು ಅಪಾಯದ ಅಂಚಿನಲ್ಲಿದ್ದು, ಈ ಮನೆಗಳಿಗೆ ರಕ್ಷಣೆ ನೀಡಬೇಕು ಕೂಡಲೇ ತಡೆಗೋಡೆ ಕುಸಿತವನ್ನು ಸ್ಯಾಂಡ್ ಬ್ಯಾಗ್ ಅಳವಡಿಸಿ ತಡೆಗೋಡೆ ಕುಸಿತವನ್ನು ತಡೆಗಟ್ಟಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳಬೇಕೆಂದು ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ಪಾಲಿಕೆ ವತಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿ ಸೋಜ ಸ್ಥಳಕ್ಕೆ ಭೇಟಿ ನೀಡಿದ ಇಂಜಿನಿಯರ್‌ಗಳಿಗೆ ಸೂಚಿಸಿದರು. ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿ ಸೋಜ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಸ್ಥಳೀಯ ವಾರ್ಡ್ ಅಧ್ಯಕ್ಷ ಪ್ರಶಾಂತ್, ಮೀನಾ ಟೆಲ್ಲಿಸ್, ಹೇಮ, ಮಾರ್ಕೋ, ಶಮೀನಾ, ದಿನೇಶ್, ಶ್ವೇತಾ, ರಮೇಶ್, ಪ್ರೇಮಾ, ವತ್ಸಲಾ, ಶೋಭಾ, ಗ್ರೇಸ್ ರೋಡ್ರಿಗಸ್,ಮೆಟಿಲ್ಡಾ, ಎಡ್ವಿನ್, ನವೀನ್,ಶಲ್ಮಾ, ಮೀರಾ, ಪ್ಯಾರಿಸ್, ತನ್ನು ಸ್ಟ್ಯಾನ್ಲಿ, ಹಿಲ್ಡಾ ಮುಂತಾದವರು ಜೊತೆಗಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News