×
Ad

ಸಿಎ ಪರೀಕ್ಷೆಯಲ್ಲಿ ಪ್ರಜ್ವಲ್, ಶ್ರೀಯಾ ಶೆಣೈ ಉತ್ತೀರ್ಣ

Update: 2025-07-08 22:24 IST

ಮಂಗಳೂರು, ಜು.8: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹಳೆಯಂಗಡಿ ತೋಕೂರು ನಿವಾಸಿ ಪ್ರಜ್ವಲ್ ಹಾಗೂ ಮಂಗಳೂರು ಬಿಕರ್ನಕಟ್ಟೆ ನಿವಾಸಿ ಶ್ರೀಯಾ ಶೆಣೈ ಇವರು ಉತ್ತೀರ್ಣರಾಗಿದ್ದಾರೆ.

ಪ್ರಜ್ವಲ್ ಇವರು ಹಳೆಯಂಗಡಿ ತೋಕೂರು ನಿವಾಸಿಗಳಾದ ನಾರಾಯಣ ಬಂಗೇರ - ಚಂಚಲಾಕ್ಷಿ ದಂಪತಿಯ ಪುತ್ರ ಹಾಗೂ ಶ್ರೀಯಾ ಶೆಣೈ ಇವರು ಮಂಗಳೂರು ಬಿಕರ್ನಕಟ್ಟೆ ನಿವಾಸಿಗಳಾದ ಪಿ. ಗಣೇಶ್ ಶೆಣೈ - ಶಾಲಿನಿ ಶೆಣೈ ದಂಪತಿ ಪುತ್ರಿಯಾಗಿದ್ದಾರೆ.

ಪ್ರಜ್ವಲ್ ಹಾಗೂ ಶ್ರೀಯಾ ಶೆಣೈ ಇವರು ಮಂಗಳೂರಿನ ಸಿಎ ಪಿ. ನರೇಂದ್ರ ಪೈ ಅವರ ಮಾರ್ಗದರ್ಶನ ದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗೆ ತಯಾರಿ ನಡೆಸಿದ್ದು , ಇದೀಗ ಇವರ ಸಂಸ್ಥೆಯಲ್ಲಿ ತರಬೇತಿ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News