×
Ad

ಮಂಗಳೂರು: ಅಕ್ಷರದಾಸೋಹ ನೌಕರರ ಪ್ರತಿಭಟನೆ

Update: 2025-07-09 18:43 IST

ಮಂಗಳೂರು, ಜು.9: ರಾಜ್ಯ ಸರಕಾರವು ಹೊರಡಿಸಿದ ಆದೇಶದಂತೆ ನಿವೃತ್ತ ಬಿಸಿಯೂಟ ಕಾರ್ಮಿಕರಿಗೆ 2022ರ ಮಾರ್ಚ್ 31ರಿಂದ ಇಡಿಗಂಟು ಮೊತ್ತವನ್ನು ವಿತರಿಸಬೇಕು ಎಂದು ಆಗ್ರಹಿಸಿ ಅಕ್ಷರದಾಸೋಹ ನೌಕರರ ಸಂಘವು ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದೆ.

ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ,ಸಂಘದ ಅಧ್ಯಕ್ಷೆ ಭವ್ಯಾ, ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜಯಂತಿ ಬಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿರಿಜಾ ಮತ್ತಿತರರು ಮಂಗಳೂರು ತಾಪಂ ಇಒ ಅವರಿಗೆ ಇಡಿಗಂಟು ಮೊತ್ತವನ್ನು ವಿತರಿಸಬೇಕು ಎಂದು ಮನವಿ ಸಲ್ಲಿಸಿದರು.

ಸಂಘದ ರೇಖಲತಾ, ಆಸ್ಮಾ, ಶಬನಾ ಬೇಗಂ, ಉಮಾವತಿ, ಅನಿತಾ, ಶೋಭಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News