ಮಂಗಳೂರು: ಹೆಡ್ ಕಾನ್‌ಸ್ಟೇಬಲ್‌ಗಳಿಗೆ ಮುಂಬಡ್ತಿಯೊಂದಿಗೆ ವರ್ಗಾವಣೆ
Update: 2025-07-10 21:49 IST
ಮಂಗಳೂರು, ಜು.10: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗಳನ್ನು ಸಹಾಯಕ ಉಪನಿರೀಕ್ಷಕ (ಎಎಸ್ಸೈ) ಹುದ್ದೆಗೆ ಮುಂಬಡ್ತಿ ನೀಡಿ ಇತರ ಠಾಣೆಗಳಿಗೆ ವರ್ಗಾವಣೆಗೊಳಿಸಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.
ಸಂಚಾರ ಉತ್ತರ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದ ಜಯರಾಮ ಬಿ. ಅವರನ್ನು ಕಾವೂರು ಠಾಣೆಗೆ, ಮಹಿಳಾ ಠಾಣೆಯ ಪ್ರಸಾದ್ ಎನ್. ಅವರನ್ನು ಸಂಚಾರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಗಣೇಶ್ ಕುಮಾರ್ ಅವರನ್ನು ಪಾಂಡೇಶ್ವರ ಠಾಣೆಗೆ, ಪಾಂಡೇಶ್ವರ ಠಾಣೆಯ ದೇವದಾಸ್ ಸೋಲಂಕರ್ ಅವರನ್ನು ಸಿಸಿಆರ್‌ಬಿ, ಸಿಐಡಿ ಪುರುಷೋತ್ತಮ್ ಅವರನ್ನು ಪಾಂಡೇಶ್ವರ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.