×
Ad

ನಾರಾಯಣ ಗುರುಗಳ ಶಿಕ್ಷಣ ಬುದ್ಧಿಗಿಂತ ಹೃದಯ ಕೇಂದ್ರಿತವಾಗಿತ್ತು: ಡಾ.ಕೆ. ಚಿನ್ನಪ್ಪ ಗೌಡ

Update: 2025-07-13 21:27 IST

ಡಾ.ಮಂಗಳೂರು: ಕೇರಳದಲ್ಲಿ ಧನಾತ್ಮಕ ರಾಜಕೀಯ ಪ್ರಜ್ಞೆ ಯನ್ನು ಮೂಡಿಸಿದವರು ನಾರಾಯಣ ಗುರುಗಳು. ಅವರು ಶಿಕ್ಷಣ ಬುದ್ಧಿಗಿಂತ ಹೃದಯ ಕೇಂದ್ರಿತವಾಗಿತ್ತು ಎಂದು ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ. ಸಮಾರೋಪ ಭಾಷಣ ಮಾಡಿದರು.

ನಗರದ ಶ್ರೀಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ‘ಶೈಕ್ಷಣಿಕ ಪುನರುತ್ಥಾನ ಮತ್ತು ಶ್ರೀನಾರಾಯಣ ಗುರು ’ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ದೇವಾಲಯಗಳ ಮೂಲಕ ಹೃದಯ ಪರಿವರ್ತನೆಯಾಗಬೇಕೆಂದರು. ಮಹಿಳಾ ಶಿಕ್ಷಣಕ್ಕೆ ಆದ್ಯತೆ, ದಲಿತರು ಮತ್ತು ಅವಕಾಶ ವಂಚಿತರಿಗೆ ಶಿಕ್ಷಣದ ಅವಕಾಶವನ್ನು ತೆರೆದಿಟ್ಟರು. ಒಂದು ರೀತಿಯಲ್ಲಿ ದೇವನೇ ಕೈ ಬಿಟ್ಟ ಜಗತ್ತಿನಲ್ಲಿ ಜಾಗೃತಿ ಮೂಡಿಸಿದರು. ಸ್ಥಾಪಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯದೆ ಅವರಿಗೆ ಅವರ ಅರಿವಿಗೆ ಬದಲಾವಣೆ ಮಾಡಿದರು. ಕೇರಳವೆಂಬ ಹುಚ್ಚಾಸ್ಪತ್ರೆಯಲ್ಲಿ ವಿವೇಕ ಅರಿವು ಮೂಡಿಸಿದರು ಎಂದರು.

ನಾರಾಯಣ ಗುರುಗಳ ಭಾಷಾ ನೀತಿ ತ್ರಿಭಾಷಾ ಸೂತ್ರಕ್ಕೆ ಆದ್ಯತೆ ನೀಡಿದರು. ಮನೆಯ ಭಾಷೆ ಮಲಯಾಳಂ, ಜಗತ್ತಿನ ಆಗುಹೋಗಳನ್ನು ಕಲಿಯಲು ಇಂಗ್ಲಿಷ್ ಮತ್ತು ನಮ್ಮ ದೇಶದ ಜ್ಞಾನ ಪರಂಪರೆಯನ್ನು ತಿಳಿಯಲು ಸಂಸ್ಕೃತ ಕಲಿಯಬೇಕು ಎಂದು ಹೇಳಿದರು.

ದೇವಸ್ಥಾನಕ್ಕೆ ಭಕ್ತಿಯಿಂದ ಹೂ ತೆಗದುಕೊಂಡು ಹೋಗುವ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಎಂದು ಶಿಕ್ಷಣದ ಬಗ್ಗೆ ನಾರಾಯಣ ಗುರು ಹೇಳಿದರು.

ನಾರಾಯಣ ಗುರು ಅಧ್ಯಯನ ಕೇಂದ್ರದ ಮೂಲಕ ಮಕ್ಕಳಿಗೆ ನೈತಿಕ ಶಿಕ್ಷಣ ಸಿಗಬೇಕು. ಅವು ಧ್ಯಾನ ಮಂದಿರವಾಗಬೇಕು, ಓದು,ಜ್ಞಾನ ಹಂಚಿಕೆಯಾಗಬೇಕು ಎಂದು ನುಡಿದರು.

ಸಾಮಾಜಿಕ ಸಾಮರಸ್ಯಕ್ಕೆ ಶ್ರೀ ನಾರಾಯಣ ಗುರು ಸೂತ್ರಗಳು ವಿಷಯದ ಬಗ್ಗೆ ಮಾತನಾಡಿದ ಪತ್ರಕರ್ತರು ಮತ್ತು ಲೇಖಕರಾದ ಎನ್‌ಎ.ಎಂ.ಇಸ್ಮಾಯೀಲ್ ಅವರು ಕೇರಳದಲ್ಲಿ ಅತಿ ಹೆಚ್ಚು ಸಾಮಾಜಿಕ ಬದಲಾವಣೆ ಮಾಡಿದ ನಾರಾಯಣ ಗುರುಗಳನ್ನು ನಾವು ನಿರಂತರವಾಗಿ ಅರಿಯಬೇಕಾಗಿದೆ ಎಂದು ಹೇಳಿದರು.

ರವಿಂದ್ರನಾಥ ಟಾಗೋರ್ ಅವರು ತಾನು ಪ್ರಪಂಚದ ನಾನಾ ಭಾಗಗಳನ್ನು ಸುತ್ತಿದ್ದರೂ ನಾರಾಯಣ ಗುರುಗಳಿಗಿಂತ ಆಧ್ಮಾತ್ಮಿಕವಾಗಿ ಶ್ರೇಷ್ಠರಾದವರನ್ನು ಕಂಡಿಲ್ಲ ಎಂದು ಪ್ರಶಂಸಿಸಿದ್ದರು ಎಂದರು.

ಮೂರನೇ ಗೋಷ್ಠಿಯಲ್ಲಿ ಸರಳ ಧಾರ್ಮಿಕ ಅನುಷ್ಠಾನದಲ್ಲಿ ದೈವದಶಕಂ ಪ್ರಭಾವ ಎಂಬ ವಿಷಯದಲ್ಲಿ ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ವಿಷಯ ಮಂಡಿಸಿದರು.

*ಮುಕ್ತ ಸಂವಾದ: ‘ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ’ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ, ಸರಕಾರಿ ಪ.ಪೂ ಕಾಲೇಜು ಪ್ರಾಂಶುಪಾಲೆ ಡಾ.ಜ್ಯೋತಿಚೇಳ್ಯಾರು , ಮುಲ್ಕಿ ಸರಕಾರಿ ಪ.ಪೂ.ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ನಿವೃತ್ತ ಡೀನ್ ಡಾ.ಉಮ್ಮಪ್ಪ ಪೂಜಾರಿ ಪಿ ಪಾಲ್ಗೊಂಡಿದ್ದರು. ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಸಂವಾದವನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News