×
Ad

ಡಾ. ಅಣ್ಣಯ್ಯ ಕುಲಾಲ್‌ಗೆ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರ ಪ್ರದಾನ

Update: 2025-07-14 20:29 IST

ಮಂಗಳೂರು: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರ ಘಟಕದ ವತಿಯಿಂದ ಸಮಾಜಮುಖಿ ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಸಂಘಟನೆಗಾಗಿ ಮಂಗಳೂರು ಐಎಂಎ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಐಎಂಎ ನಿಯೋಜಿತ ಉಪಾಧ್ಯಕ್ಷ ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಡಾ.ಬಿ.ಸಿ. ರಾಯ್ ಸ್ಮಾರಕ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರವನ್ನು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ ಇಂಡಿಯಾ ಸಬಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಶಾಸಕ ಡಾ. ಅನಿಲ್ ಗೋಯಲ್, ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ. ದಿಲೀಪ್ ಭಾನುಶಾಲಿ, ನಿಕಟ ಪೂರ್ವ ಅಧ್ಯಕ್ಷ ಡಾ.ಆರ್.ವಿ. ಅಶೋಕನ್, ರಾಷ್ಟ್ರೀಯ ನಿಯೋಜಿತ ಅಧ್ಯಕ್ಷ ಡಾ.ಅನಿಲ್ ಕುಮಾರ್ ಜೆ. ನಾಯಕ್, ಕಾರ್ಯದರ್ಶಿ ಡಾ. ಸರ್ಬರಿ ದತ್ತ, ಹಣಕಾಸು ಕಾರ್ಯದರ್ಶಿ ಡಾ. ಪಿಯೂಷ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News