ಗುರುಪುರ: ಗದ್ದೆಯಲ್ಲಿ ಸಾಂಪ್ರದಾಯಿಕ ಕೃಷಿಗೆ ಚಾಲನೆ
Update: 2025-07-14 20:40 IST
ಗುರುಪುರ: ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಬದಿನಮನೆ (ಭಂಡಾರದ ಮನೆ) ಒಡೆತನಕ್ಕೆ ಸೇರಿದ ಭತ್ತ ಕೃಷಿ ಗದ್ದೆಯಲ್ಲಿ ಸೋಮವಾರ ದೈವಸ್ಥಾನದ ಪ್ರಧಾನ ಅರ್ಚಕ ಹಾಗೂ ಮುಂಡಿತ್ತಾಯ ದೈವದ ಪಾತ್ರಿ ತಿಮ್ಮ ಯಾನೆ ಚಂದ್ರಹಾಸ ಕೌಡೂರು ಅವರು ಗದ್ದೆಗೆ ‘ಕಾಪು’ ಅಳವಡಿಸುವ ಮೂಲಕ ಸಾಂಪ್ರದಾಯಿಕ ಭತ್ತದ ನೇಜಿ ನಾಟಿಗೆ ಚಾಲನೆ ನೀಡಿದರು.
ದೈವಸ್ಥಾನದ ವಾರ್ಷಿಕ ‘ದೊಂಪದಬಲಿ’ ಸೇವೆ ನಡೆಯುವ ಗದ್ದೆಗೆ ದೈವದ ಪಾತ್ರಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಅವರು ಮುಚ್ಚೂರಿನ ಮೀನಾಕ್ಷಿ ಬಾಯಿ ನೇತೃತ್ವದ 11 ಮಂದಿ ಕುಡುಬಿ ಕೂಲಿ ಮಹಿಳೆ ಯರೊಂದಿಗೆ ನೇಜಿ ನೆಟ್ಟು ಕೃಷಿಯ ಬಗ್ಗೆ ತನಗಿರುವ ಆಸಕ್ತಿ ವ್ಯಕ್ತಪಡಿಸಿದರು.
ಈ ಸಂದರ್ಭ ಚಂದ್ರಹಾಸ ಕೌಡೂರು, ಲೀಲಾ, ಶೇಖರ್ ಕೋಟ್ಯಾನ್ ಮತ್ತಿತರರಿದ್ದರು.