ಕಿನ್ಯ: ಕುತುಬಿಯ ಹಳೆ ವಿದ್ಯಾರ್ಥಿ ಸಮಿತಿಯಿಂದ ರಕ್ತದಾನ ಶಿಬಿರ
ಉಳ್ಳಾಲ: ಕಿನ್ಯದ ಕುತುಬಿಯ ಹಳೆ ವಿದ್ಯಾರ್ಥಿ ಸಮಿತಿಯ ಸುವರ್ಣ ಮಹೊತ್ಸವದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಯೋಗದಲ್ಲಿ, ದೇರಳಕಟ್ಟೆ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ರಕ್ತನಿಧಿಯ ಸಹಬಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಕಿನ್ಯ ಕುತುಬಿಯ ಮದ್ರಸದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಮಿತಿಯ ಅಧ್ಯಕ್ಷ ಅಶ್ರಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಲೀಲ್ ಚಾಕಟ್ಟೆ ಪಡ್ಪು ದುಆ ನೆರವೇರಿಸಿದರು. ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಿನ್ಯ ಕೇಂದ್ರ ಜಮಾಅತ್ ಅಧ್ಯಕ್ಷ ಅಬೂಸಾಲಿ ಹಾಜಿ ಮಾತನಾಡಿ ಶುಭ ಹಾರೈಸಿದರು. ಕಿನ್ಯ ಜಮಾಅತ್ ಮಾಜಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಶಿಬಿರದ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು. ಸಿ.ವಿ. ಗೋಲ್ಡನ್ ಹೆಲ್ತ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ಅಬೂಬಕರ್ ಕುತುಬಿ ನಗರ, ಮದ್ರಸ ಪ್ರಧಾನ ಅಧ್ಯಾಪಕ ಫಾರೂಕ್ ದಾರಿಮಿ ಸಮಿತಿಯ ಕಾರ್ಯಗಳ ಶ್ಲಾಘನೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಸಾಧು ಕುಂಞಿ ಹಾಜಿ ಸಾಗ್ ಭಾಗ್, ಕಾರ್ಯದರ್ಶಿ ಮುಹಮ್ಮದ್, ಇಸ್ಮಾಯೀಲ್ ಸಾಗ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ಬಾವು ಜೆ.ಕೆ., ಮುಸ್ತಫ ಕೆ.ಎಂ., ನಝೀರ್ ಸಿ.ವಿ. ಹಾಗೂ ಬ್ಲಡ್ ಹೆಲ್ಪ್ ಲೈನ್ ನ ಕಾರ್ಯನಿರ್ವಾಹಕ ನೌಶಾದ್ ಮಂಚಿ, ಯೆನೆಪೊಯ ಆಸ್ಪತ್ರೆಯ ಡಾ.ಸೈಫ್ ಮತ್ತಿತರರು ಉಪಸ್ಥಿತರಿದ್ದರು.