×
Ad

ಕಲ್ಲಡ್ಕದಲ್ಲಿ ಎಸ್.ವೈ.ಎಸ್. 'ಸೌಹಾರ್ದ ಸಂಚಾರ'

Update: 2025-07-16 13:05 IST

ಕಲ್ಲಡ್ಕ: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್.ವೈ.ಎಸ್.)ವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿರುವ 3 ದಿನಗಳ 'ಸೌಹಾರ್ದ ಸಂಚಾರ'ವು ಬಿ.ಸಿ.ರೋಡ್ ನಡೆಯಿತು.

 ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಕಲ್ಲಡ್ಕ ಕೆ.ಸಿ.ರೋಡ್ ನಿಂದ ಕಲ್ಲಡ್ಕ ಜಂಕ್ಷನ್ ತನಕ ಕಾಲ್ನಡಿಗೆ ಜಾಥಾ ನಡೆಯಿತು. ಬಳಿಕ ಕಲ್ಲಡ್ಕ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಿದರು. ಅಮ್ಟೂರು ಚರ್ಚ್ ಫಾದರ್ ನವೀನ್ ಪ್ರಕಾಶ್ ಪಿಂಟೋ, ಸಮಾಜ ಸೇವಕ ರಾಮಣ್ಣ ಶೆಟ್ಟಿ ವಿಟ್ಲ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಮಹಮ್ಮದಲಿ ಸಖಾಫಿ ಅಶ್ಅರಿಯ್ಯಾ ಮಾತನಾಡಿದರು.

ಸೈಯದ್ ಶಿಹಾಬುದ್ದೀನ್ ಮದಕ, ದಾವೂದ್ ಕಲ್ಲಡ್ಕ, ಝಕರಿಯಾ ನಾರ್ಶ, ಎಸ್.ವೈ.ಎಸ್. ರಾಜ್ಯ ಉಪಾಧ್ಯಕ್ಷರುಗಳಾದ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸೈಯದ್ ಶಾಫಿ ನಈಮಿ ತಂಙಳ್ ಮಾರ್ನಹಳ್ಳಿ, ಸೈಯದ್ ಹಾಮೀಮ್ ತಂಙಳ್ ಚಿಕ್ಕಮಗಳೂರು, ಇಬ್ರಾಹೀಂ ಸಖಾಫಿ ಪಯೋಟ, ಇಸ್ಹಾಖ್ ಝುಹ್ರಿ ಕಾನಕೆರೆ, ಮಹ್ಬೂಬ್ ಸಖಾಫಿ ಕಿನ್ಯ, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಅಶ್ರಫ್ ಎಮ್ಮೆಮಾಡು, ಇಬ್ರಾಹೀಂ ಮೂಡಿಗೆರೆ, ಸಲೀಂ ಕನ್ಯಾಡಿ, ಕಲಂದರ್ ಕಕ್ಕೆಪದವು, ಯಾಕೂಬ್ ಸಅದಿ ನಾವೂರು, ನವಾಝ್ ಸಖಾಫಿ ಅಡ್ಯಾರ್, ಮೊದಲಾದವರು ಉಪಸ್ಥಿತರಿದ್ದರು.

ಖಲೀಲ್ ಮಾಲಿಕಿ ಸ್ವಾಗತಿಸಿದರು. ಕರೀಂ ಕೆದ್ಕಾರ್ ವಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News