ಸಜಿಪನಡು: ಗ್ರಾಪಂ ಸದಸ್ಯನಿಂದ ಏಕಾಂಗಿ ಧರಣಿ
ಕೊಣಾಜೆ, ಜು.17: ಸಜೀಪನಡು ಗ್ರಾಪಂ ಆಡಳಿತವು ಮೂಲಭೂತ ಸೌಲಭ್ಯದ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದೆ ಮತ್ತು ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಸಜಿಪನಡು ಗ್ರಾಪಂನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನಾಸಿರ್ ಸಜಿಪ ಗುರುವಾರ ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಗ್ರಾಪಂ ಕಚೇರಿಯ ಮುಂದೆ ಧರಣಿ ನಡೆಸಿದರು.
ತನ್ನ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುವುದಾಗಿ ನಾಸಿರ್ ಸಜಿಪ ಪಟ್ಟು ಹಿಡಿದರು. ಈ ಸಂದರ್ಭ ಗ್ರಾಪಂ ಕಾರ್ಯದರ್ಶಿ ಮತ್ತು ಪಿಡಿಒ ಶೀಘ್ರ ಬೇಡಿಕೆಯನ್ನು ಈಡೇರಿಸುವುದಾಗಿ ತಿಳಿಸಿದರು.
ಗ್ರಾಮದ ದಾರಿದೀಪ ದುರಸ್ತಿಪಡಿಸಬೇಕು ಮತ್ತು ಚರಂಡಿಯ ಹೂಳೆತ್ತಬೇಕು ಎಂದು ಜು.1 ಮತ್ತು 5ರಂದು ಮನವಿ ಸಲ್ಲಿಸಿದ್ದೆ. ಆದರೆ ಯಾವುದೇ ಕ್ರಮಕೈಗೊಳ್ಳದ ಕಾರಣ ತಾನು ಇಂದು ಅನಿವಾರ್ಯವಾಗಿ ಧರಣಿ ಕೂರಬೇಕಾಯಿತು. ಜು.18ರಂದು ಬೆಳಗ್ಗೆ ದಾರಿದೀಪ ದುರಸ್ತಿ ಮತ್ತು ಶೀಘ್ರ ಹೂಳೆತ್ತುವ ಕಾಮಗಾರಿ ಆರಂಭಿಸುವುದಾಗಿ ಕಾರ್ಯದರ್ಶಿ ಮತ್ತು ಪಿಡಿಒ ತಿಳಿಸಿದ್ದಾರೆ. ಅದರಂತೆ ಶುಕ್ರವಾರ ದಾರಿದೀಪ ವ್ಯವಸ್ಥೆ ಮಾಡದಿದ್ದರೆ ಧರಣಿ ಮುಂದುವರಿಸುವುದಾಗಿ ನಾಸಿರ್ ಸಜಿಪ ತಿಳಿಸಿದ್ದಾರೆ.