"ಮಣ್ಣಿನಲ್ಲಿ ಕೈಗಳು, ಭಾರತದೊಂದಿಗೆ ಹೃದಯಗಳು" ಪರಿಸರ ಸಂರಕ್ಷಣಾ ಅಭಿಯಾನ
ಉಳ್ಳಾಲ: ರಾಷ್ಟ್ರೀಯ ಮಟ್ಟದ ಸಂಘಟನೆಯಾಗಿರುವ ಚಿಲ್ಡನ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪರಿಸರ ಸಂರಕ್ಷಣಾ ಅಭಿಯಾನದ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನವನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಉಳ್ಳಾಲದಲ್ಲೂ ಕಳೆದ ಐದು ವರ್ಷಗಳಿಂದ ಸಿಐಒ ಐದು ಕಡೆಗಳಲ್ಲಿ ಪ್ರತೀ ವಾರ ಕಾರ್ಯಕ್ರಮ ನಡೆಯುತ್ತಿದೆ.
ಈ ಬಗ್ಗೆ ಈ ಸಂಘಟನೆಗಳಲ್ಲಿರುವ ವಿದ್ಯಾರ್ಥಿಗಳೇ ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂಘಟನೆ ವತಿಯಿಂದ 2025 ಜೂನ್ 25 ರಿಂದ ಜುಲೈ 26 ರವರೆಗೆ ರಾಷ್ಟ್ರೀಯ ಮಟ್ಟದಲ್ಲಿ "ಮಣ್ಣಿನಲ್ಲಿ ಕೈಗಳು, ಭಾರತದೊಂದಿಗೆ ಹೃದಯಗಳು" ಎಂಬ ಪರಿಸರ ಸಂರಕ್ಷಣಾ ಅಭಿಯಾನದ ಮುಖಾಂತರ ದೇಶಾದ್ಯಂತ ಒಂದು ಮಿಲಿಯನ್ ಗಿಡಗಳನ್ನು ನೆಟ್ಟು ಅದನ್ನು ಸಂರಕ್ಷಿಸುವ ಯೋಜನೆ ಯನ್ನು ಹಮ್ಮಿಕೊಂಡಿದೆ. ಕೇವಲ ಗಿಡಗಳನ್ನು ನೆಡುವುದಲ್ಲದೆ, ಎಲ್ಲರಿಗೂ ಹಸಿರು, ಸ್ವಚ್ಛ ಮತ್ತು ಹೆಚ್ಚು ನಿರೀಕ್ಷಿತ ಭವಿಷ್ಯವನ್ನು ಕಟ್ಟಲು ಒಟ್ಟಾಗಿ ಕಾರ್ಯನಿರ್ವಹಿಸುವ ಯೋಜನೆಯನ್ನು ಹೊಂದಿದೆ ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ, ಆರಾಧನಾ ಸ್ಥಳಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡವನ್ನು ನೆಡುವ ಕಾರ್ಯ ಕ್ರಮಗಳು, ಜಾಗೃತಾ ರ್ಯಾಲಿ ಹಾಗೂ ವಿವಿಧ ಸ್ಪರ್ಧೆಗಳನ್ನು ದೇಶದಾದ್ಯಂತ ನಡೆಯುತ್ತಿದೆ. ಉಳ್ಳಾಲದಲ್ಲೂ ಗಿಡ ನೆಡುವ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು, ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಿಐಒ ಸದಸ್ಯರಾದ ಹಿರಾ ಸ್ಕೂಲ್ ನ ಅಮ್ನಾನ್ ಅಹ್ಮದ್ , ಸೈಂಟ್ ಮೇರಿಸ್ ಸ್ಕೂಲ್ ನ ಹಾಜಿರಾ ಹನಿಯ್ಯ , ಪೀಸ್ ಪಬ್ಲಿಕ್ ಸ್ಕೂಲ್ ನ ರಿಫಾ ಮಾಶಿತ ,ವಿದ್ಯಾರತ್ನ ಸ್ಕೂಲ್ ನ ಆಯಿಶಾ ಶಹರೀನ್ ,ಹಿರಾ ಶಾಲೆಯ ಮುಹಮ್ಮದ್ ಅಯಾನ್ , ಖತೀಜ ನಿಮ್ಮ ಅಭಿಯಾನದ ಬಗ್ಗೆ ವಿವರಣೆಯನ್ನು ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಿಐಒ ಸಂಚಾಲಕರಾದ ನಿಝಾಮುದ್ದೀನ್ ಉಮರ್ , ಮಹಿಳಾ ಸಂಚಾಲಕಿ ಹಪ್ಪಾ, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಅಧ್ಯಕ್ಷ ಅಬ್ದುಲ್ ಮಜೀದ್, ಮಹಿಳಾ ಸಂಚಾಲಕಿ ಝರೀನ ಬೇಗಮ್, ಜಿಐಓ ಸದಸ್ಯೆ ಹಿಪ್ಪಾ ಮತ್ತಿತರರು ಉಪಸ್ಥಿತರಿದ್ದರು.