×
Ad

ಮುಡಾ ಬಡಾವಣೆ: ನಿವೇಶನಕ್ಕೆ ಅರ್ಜಿ ಆಹ್ವಾನ

Update: 2025-07-18 19:43 IST

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕೊಣಾಜೆ ಗ್ರಾಮದಲ್ಲಿರುವ 11.64 ಎಕರೆ ಜಮೀನಿನಲ್ಲಿ ರಚಿಸಿರುವ ಉದ್ದೇಶಿತ ವಸತಿ ಬಡಾವಣೆಯಲ್ಲಿ ವಾಸದ ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಆ.14ರೊಳಗೆ ಮುಡಾ ಪ್ರಾಧಿಕಾರದ ಕಚೇರಿ ವೇಳೆ ಅರ್ಜಿ ಸ್ವೀಕರಿಸಬಹುದು. ನಿವೇಶನಗಳ ಬೆಲೆ ತಾತ್ಕಾಲಿಕವಾಗಿದ್ದು, ವ್ಯತ್ಯಾಸವಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News