‘ಅರಿವು, ಮಾಹಿತಿಯ ಕೊರತೆಯೇ ಸೈಬರ್ ಅಪರಾಧಗಳಿಗೆ ಮೂಲ: ಎಸಿಪಿ ಗೀತಾ ಕುಲಕರ್ಣಿ
ಮಂಗಳೂರು: ಅರಿವು ,ಮಾಹಿತಿಯ ಕೊರತೆಯೇ ಸೈಬರ್ ಅಪರಾಧಗಳಿಗೆ ಮೂಲ ಎಂದು ಮಂಗಳೂರಿನ ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ ಹೇಳಿದ್ದಾರೆ.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶುಕ್ರವಾರ ಕುಡಾಳ್ ದೇಶ್ಕರ್ ಸಮಾಜದ ಮೂರು ದಿನಗಳ ವಿದ್ಯಾರ್ಥಿಗಳ ಸನಿವಾಸ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮಲ್ಲಿರುವ ಸಂಶಯಗಳನ್ನು ಪ್ರಶ್ನೆಗಳ ಮೂಲಕ ತಿಳಿದು ಕೊಂಡರು. ಮಾತ್ರವಲ್ಲದೆ ಸಂವಾದ ನಡೆಸಿ, ಮಾಹಿತಿಯನ್ನು ಪಡೆದುಕೊಂಡರು. ಕೆಲವರು ತಮ್ಮ ತಮ್ಮ ಬದುಕಿನಲ್ಲಿ ನಡೆದಿರುವ ಸೈಬರ್ ಅಪರಾಧ ಅಥವಾ ವಂಚನೆಗಳ ಬಗ್ಗೆ ಅನುಭವವನ್ನು ಹಂಚಿಕೊಂಡು ಪರಿಹಾರದ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾ ಅಧಿಕಾರಿ ಡಾ.ಬಿ. ದೇವದಾಸ್ ಪೈ ಹಾಗೂ ಕೇಂದ್ರದ ಉಪಾಧ್ಯಕ್ಷ ಡಿ ರಮೇಶ ನಾಯಕ್ ಮೈರಾ, ಹಾಗೂ ದ.ಕ.ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಮತ್ತು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಪ್ರಭು ವಗ್ಗ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಕುಂಟಲ್ಪಾಡಿ, ಉಪೇಂದ್ರ ನಾಯಕ್ ಗುರುನಗರ, ಅನಂತ ನಾಯಕ್ ಮೇರೀಹಿಲ್, ಮೋಹನ್ ನಾಯಕ್ ಒಡ್ಡೂರು, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಸುಚಿತ್ರ ರಮೇಶ ನಾಯಕ್, ದಿವಾಕರ್ ಶೆಣೈ ಮರೋಳಿ, ನಾಗೇಶ್ ನಾಯಕ್ ಕುಂಟಲ್ಪಾಡಿ, ಮುಂತಾದವರು ಉಪಸ್ಥಿತರಿದ್ದರು.
ಮನೋಜ್ ಕುಮಾರ್ ಹಾಗೂ ಆಕಾಶ್ ಇವರು ಸಹಕರಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ನಾಯಕ್ ಒಡ್ಡೂರು ವಂದಿಸಿದರು.