×
Ad

ಕಲ್ಕಟ್ಟ: ಕೂರತ್ ತಂಙಳ್ ಅನುಸ್ಮರಣೆ, ವಿದ್ಯಾರ್ಥಿ - ಪೋಷಕರ ಸಮಾವೇಶ

Update: 2025-07-20 10:17 IST

ದೇರಳಕಟ್ಟೆ: ಕರ್ನಾಟಕ ಮುಸ್ಲಿಮ್ ಜಮಾಅತ್ ಕಲ್ಕಟ್ಟ ಇದರ ಆಶ್ರಯದಲ್ಲಿ ಸೈಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಅನುಸ್ಮರಣೆ ಹಾಗೂ ವಿದ್ಯಾರ್ಥಿ - ಪೋಷಕರ ಸಮಾವೇಶ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಇತ್ತೀಚೆಗೆ ಶಾಲಾ ಮಕ್ಕಳು ಕೂಡಾ ಡ್ರಗ್ಸ್ ದಂಧೆಗೆ ಬಲಿಯಾಗುವುದು ಜಾಸ್ತಿ ಆಗುತ್ತಿದೆ. ಈ ಬಗ್ಗೆ ಪೋಷಕರು ತುಂಬಾ ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಮುಸ್ಲಿಮ್ ಜಮಾಅತ್ ಕಲ್ಕಟ್ಟ ಘಟಕದ ಅಧ್ಯಕ್ಷ ಡಿಐ ಅಬೂಬಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಲ್ಕಟ್ಟ ಜುಮಾ ಮಸೀದಿಯ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸದ್ ರ್ ಉಸ್ತಾದ್ ಶರೀಫ್ ಸಅದಿ ದುಆ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಅವರನ್ನು ಸನ್ಮಾನಿಸಲಾಯಿತು.

ಕಲ್ಕಟ್ಟ ಜುಮಾ ಮಸೀದಿಯ ಉಪಾಧ್ಯಕ್ಷ ಅಶ್ರಫ್ ಕಟ್ಟೆ, ಮುಹಮ್ಮದ್ ಕಂಡಿಕ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೋನು ಕಲ್ಕಟ್ಟ, ಕಾರ್ಯದರ್ಶಿ ಹಸೈನಾರ್ ತಟ್ಲ, ರಝಾಕ್ ಕಂಡಿಕ, ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು, ಇಸ್ಮಾಯೀಲ್ ಸಅದಿ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

ಇಬ್ರಾಹೀಂ ಮದನಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಾಸ್ಟರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News