ನ.5: ಪಿ.ಎಂ.ಎನ್. ಮೂರ್ತಿ ‘ನೂರರ ನೆನಪು’ ಕಾರ್ಯಕ್ರಮ
Update: 2023-11-02 19:50 IST
ಮಂಗಳೂರು, ನ.2: ಕರಾವಳಿ ಜಿಲ್ಲೆಗಳ ಕಾರ್ಮಿಕ ಮತ್ತು ರೈತ ಸಂಘಟನೆಗಳ ಮುಂದಾಳು ಹಾಗೂ ಕಮ್ಯುನಿಸ್ಟ್ ನಾಯಕ ದಿವಂಗತ ಕಾಮ್ರೇಡ್ ಪಾಲಂಗಲ ಮಂಜಯ್ಯ ನಾರಾಯಣ (ಪಿ.ಎಂ.ಎನ್.) ಮೂರ್ತಿಯವರ ನೂರರ ನೆನಪು ಕಾರ್ಯ ಕ್ರಮವು ನಗರದ ಗೂಡ್ಸ್ ಶೆಡ್ ರಸ್ತೆಯ ಕಾ. ಬಿ.ವಿ. ಕಕ್ಕಿಲ್ಲಾಯ ಭವನದ ಕಾ. ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನ.5ರ ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಸಿಪಿಐ-ಎಐಟಿಯುಸಿ ಜಿಲ್ಲಾ ಸಮಿತಿ ತಿಳಿಸಿದೆ.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ವಿ.ರಾವ್ ಅಧ್ಯಕ್ಷತಯೆ ವಹಿಸಲಿದ್ದು, ಅತಿಥಿಗಳಾಗಿ ಹೊಸತು ಮಾಸ ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್, ಖ್ಯಾತ ವೈದ್ಯ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಪ್ರಕಾಶಕ ಕಲ್ಲೂರು ನಾಗೇಶ ಹಾಗೂ ಸಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಭಾಗವಹಿಸಲಿದ್ದಾರೆ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ ತಿಳಿಸಿದ್ದಾರೆ.