×
Ad

ನ.14: ಸಾಲ್ಮರದಲ್ಲಿ ಸಮಸ್ತ ಉಲಮಾ ಸಮ್ಮೇಳನ

Update: 2023-11-12 18:42 IST

ಪುತ್ತೂರು, ನ.12: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ದ.ಕ. ಜಿಲ್ಲೆಯ ಸಮಸ್ತ ಉಲಮಾ ಸಮ್ಮೇಳನವು ಪುತ್ತೂರಿನ ಸಾಲ್ಮರ ಸೈಯದ್‌ಮಲೆಯ ಶಂಸುಲ್ ಉಲಮಾ ನಗರದಲ್ಲಿ ನ.14ರಂದು ನಡೆಯಲಿದೆ.

ಬೆಳಗ್ಗೆ 7:30ಕ್ಕೆ ಪುತ್ತೂರು ಸಯ್ಯಿದ್ ಅಹ್ಮದ್ ಪೂಕೋಯ ತಂಳ್‌ರ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಲಿದೆ. 7:45ಕ್ಕೆ ಸಾಲ್ಮರ ಸಯ್ಯಿದ್ ಮುಹಮ್ಮದ್ ತಂಳ್ ಧ್ವಜಾರೋಹಣ ಮಾಡಲಿದ್ದಾರೆ. 8:30ಕ್ಕೆ ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಳ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಯ್ಯಿದ್ ಎನ್‌ಪಿಎಂ ಝೈನುಲ್ ಆಬಿದೀನ್ ತಂಳ್ ದುಗ್ಗಲಡ್ಕ ದುಆಗೈಯುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆ ವಹಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್‌ಹರಿ ಮುಖ್ಯ ಪ್ರಭಾಷಣ ಹಾಗೂ ಸಮಸ್ತ ಕರ್ನಾಟಕ ಮುಶಾವರದ ಕೋಶಾಧಿಕಾರಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಳ್ ಬೆಳ್ತಂಗಡಿ ಭಾಷಣ ಮಾಡಲಿದ್ದಾರೆ.

ಬೆಳಗ್ಗೆ 10ರಿಂದ ನಡೆಯುವ ಅಧ್ಯಯನ ತರಗತಿಯಲ್ಲಿ ‘ಆಧ್ಯಾತ್ಮಿಕತೆ’ ಎಂಬ ವಿಷಯದಲ್ಲಿ ಪಿ.ಎಂ ಅಬ್ದುಸ್ಸಲಾಂ ಬಾಖವಿ ವಡಕ್ಕೋಡು, ‘ಸಲಫಿಗಳ ಆದರ್ಶ ವೈಫಲ್ಯ’ ಎಂಬ ವಿಷಯದಲ್ಲಿ ಅಬ್ದುಸ್ಸಮದ್ ಪೂಕೋಟೂರು, ‘ತಬ್ಲೀಗ್ ಜಮಾಅತ್ ಮತ್ತು ಜಮಾಅತೇ ಇಸ್ಲಾಮೀ’ ಎಂಬ ವಿಷಯದಲ್ಲಿ ಜಸೀಲ್ ಕಮಾಲ್ ಫೈಝಿ ಆಕುಪ್ಪರಂಬ್, ‘ಅಹ್ಲು ಸನ್ನತಿವಲ್‌ ಜಮಾಅ’ ಎಂಬ ವಿಷಯದಲ್ಲಿ ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ‘ತ್ವರೀಖತ್ ಸತ್ಯ ಮತ್ತು ಮಿಥ್ಯ’ ಎಂಬ ವಿಷಯ ದಲ್ಲಿ ಎಂ.ಟಿ ಅಬೂಬಕರ್ ದಾರಿಮಿ, ‘ಮುಸ್ಲಿಂ ಮಹಿಳೆ’ ಎಂಬ ವಿಷಯದಲ್ಲಿ ಶುಹೈಬುಲ್ ಹೈತಮೀ ವಾರಾಂಬಟ್ಟ ಮಾತನಾಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅ ಶೈಖುನಾ ಪ್ರೊಫೆಸರ್ ಆಲಿಕುಟ್ಟಿ ಉಸ್ತಾದ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News