×
Ad

ನ.21: ಗಂಜಿಮಠದಲ್ಲಿ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ

Update: 2023-11-18 17:54 IST

ಮಂಗಳೂರು : ಗುರುಕಂಬಳದ ಖಿದ್ಮತ್ ಫೌಂಡೇಶನ್ ವತಿಯಿಂದ ಗಂಜಿಮಠದ ಜಿಎನ್‌ಆರ್ ಮತ್ತು ಎಜುಕೇಶನ್ ಟ್ರಸ್ಟ್ (ರಿ)ನ ಸಹಕಾರದಲ್ಲಿ ನ.21ರಂದು ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಮಾದಕ ವ್ಯಸನದ ಅರಿವು ಜಾಗೃತಿ ಕಾರ್ಯಕ್ರಮವನ್ನು ಗಂಜಿಮಠದ ಝಾರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮತ್ತು ಆಳ್ವಾಸ್ ಪುನರ್ಜನ್ಮ ದುಶ್ಚಟ ನಿವಾರಣಾ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ ಕೆ. ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಇಕೆಎ ಸಿದ್ದೀಕ್ ಅಡ್ಡೂರು, ಪೊಲೀಸ್ ಇನ್‌ಸ್ಪೆಕ್ಟರ್ ಸಂದೀಪ್ ಜಿ.ಎಸ್., ಗುರುಪುರ ಪೊಂಪೈ ಮಾತೆಯ ದೇವಾಲಯದ ಧರ್ಮಗುರು ವ. ರುಡೋಲ್ಫ್ ರವಿ ಡೇಸ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News