×
Ad

ಡಿ.12 ರ ವಕ್ಫ್ ಜಾಗೃತಿ ಸಮಾವೇಶ ಯಶಸ್ವಿಗೆ ಸುನ್ನೀ ಸಂಘಟನೆಗಳ ಜಂಟಿ ಕಾರ್ಯಕಾರಿಣಿ ಸಭೆ ಕರೆ

Update: 2024-11-25 11:20 IST

ಮಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮುಸ್ಲಿಂ ಸಮುದಾಯದ ವಕ್ಫ್ ಹಾಗೂ ಇನ್ನಿತರ ಅಲ್ಪಸಂಖ್ಯಾತ ವಿರೋಧಿ ನೀತಿ ವಿರುದ್ಧ ಕರ್ನಾಟಕ ರಾಜ್ಯ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ,ಎಸ್ ಎಂ ಎ ನೇತೃತ್ವದಲ್ಲಿ ಡಿ.12 ಗುರುವಾರದಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ವಕ್ಫ್ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುನ್ನೀ ಸಂಘಟನೆಗಳ ವಿವಿಧ ಘಟಕಗಳಿಗೆ ರಾಜ್ಯ ಸಮಿತಿಗಳ ಜಂಟಿ ಕಾರ್ಯಕಾರಿ ಸಮಿತಿ ಸಭೆ ಕರೆ ನೀಡಿದೆ.

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್ಎಫ್ ಯುನಿಟ್ ಸಮಿತಿಗಳು ತಮ್ಮ ಮೊಹಲ್ಲಾಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿಲು ಸೂಚಿಸಿದೆ. ಮಂಗಳೂರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ,ಎಸ್‌ವೈಎಸ್ ಹಾಗೂ ಎಸ್ಎಸ್ಎಫ್ ಜಂಟಿ ಕಾರ್ಯಾಕಾರಿಣಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News